ವಿದ್ಯುತ್ ಸರಬರಾಜು ಮಾಡಲು ಆರ್.ಎಂ.ಎ. ಬಾಕ್ಸ್ ಗಳಲ್ಲಿ ಅಳವಡಿಸಿದ್ದ ಸುಮಾರು 30 ಬ್ಯಾಟರಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಾಗಡಿರಸ್ತೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 4,65 ಲಕ್ಷ ಮೌಲ್ಯದ 55 ಎಕ್ಸೈಡ್ ಬ್ಯಾಟರಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿ ವ್ಯಾನ್ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಫೆ.1 ರಂದು ಮುಂಜಾನೆ ಸಾರ್ವಜನಿಕರ ಉಪಯೋಗಕ್ಕೆ ಬೆಸ್ಕಾಂ ರವರು ವಿದ್ಯುತ್ ಸರಬರಾಜಿಗೆಂದು ಆರ್.ಎಂ.ಎ. ಬಾಕ್ಸ್ ಗಳಲ್ಲಿ ಅಳವಡಿಸಿದ್ದ ಸುಮಾರು 30 ಬ್ಯಾಟರಿಗಳನ್ನು ಕಳವು ಮಾಡಿದ್ದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡ ಮಾಗಡಿ ರಸ್ತೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜು.ಎಂ.ಎಸ್ ಮತ್ತವರ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆರೋಪಿಗಳು ಮಾಗಡಿ ರಸ್ತೆ ಮತ್ತು ಬಸವೇಶ್ವರ ನಗರದಲ್ಲಿ ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದರು.