ಅಮರಾವತಿ(ಆಂಧ್ರಪ್ರದೇಶ),ಮೇ.28– ಅಡುಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಕುಸಿದು 3 ವರ್ಷದ ಮಗು ಸೇರಿ 4 ಮಂದಿ ಸಾವನ್ನಪ್ಪಿರುವ ಘಟನೆ ಅನನಪುರ್ ಜಿಲ್ಲೆಯ ಮುಳಕೇಡು ಗ್ರಾಮದಲ್ಲಿ ನಡೆದಿದೆ.
ಮುಳಕೇಡು ಗ್ರಾಮದ ಜೈನಬಿ (60), ದಾದು (36), ಶರ್ಫುನ್ನಿ (28)ಮೃತಪಟ್ಟವರು.
ದುರ್ಘಟನೆಯಲ್ಲಿ 3 ವರ್ಷದ ಮಗು ಕೂಡಾ ಸಾವನ್ನಪ್ಪಿದೆ. ಇನ್ನೂ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಎರಡು ಮನೆಗಳಿಗೂ ಹಾನಿಯಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ.
Previous Articleಖೈದಿ Escape..
Next Article ಈಕೆಯನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯುತ್ತಾರೆಯೇ?