ಬೆಂಗಳೂರು,ಮೇ.29- ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 37 ವರ್ಷದ ಮಹಿಳೆಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಿತವಾಗಿದ್ದ ವ್ಯಕ್ತಿಯನ್ನು ನಂಬಿ 4.5 ಲಕ್ಷ ರೂ. ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದು ತಿಂಗಳ ಹಿಂದೆ ಟಿಂಡರ್‌ನಲ್ಲಿ ಅದ್ವಿಕ್ ಚೋಪ್ರಾ ಎಂಬ ಮುಂಬೈ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನ ನಕಲಿ ಪ್ರೊಫೈಲ್ ನೋಡಿದ ಮಹಿಳೆಯು ಆಸಕ್ತಿ ತೋರಿಸಿದ್ದಾಳೆ.
ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದು ವಾಟ್ಸಾಪ್‌ನಲ್ಲಿ ಮೆಸೇಜ್‌ಗಳು ವಿನಿಮಯವಾಗಿವೆ. ತಾನು ಲಂಡನ್‌ನಲ್ಲಿ ಮೆಡಿಕಲ್ ಓದುತ್ತಿದ್ದೇನೆ ಎಂದು ಆತ ಬಡಾಯಿ ಕೊಚ್ಚಿಕೊಂಡಿದ್ದಾನೆ. ಅದ್ವಿಕ್ ಚೋಪ್ರಾ ಮಾತಿಗೆ ಮರುಳಾದ ಮಹಿಳೆ, ಪ್ರೀತಿಯ ಜಾಲದಲ್ಲಿ ಬಿದ್ದಿದ್ದಾಳೆ.
ಹೀಗೆ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಮೇಲ್ನೋಟಕ್ಕೆ ಅದ್ವಿಕ್ ಚೋಪ್ರಾ ಆಕೆಯ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ.
ಅಲ್ಲದೇ ಆಕೆಯನ್ನು ಭೇಟಿ ಮಾಡುವ ಇಚ್ಚೆಯನ್ನೂ ವ್ಯಕ್ತಪಡಿಸಿ, ದುಬೈ ಮೂಲಕ ಬೆಂಗಳೂರಿಗೆ ಬರುವುದಾಗಿ ಹೇಳಿದ್ದ. ಇದಾದ ಕೆಲ ದಿನಗಳ ನಂತರ ಅನಾಮಧೇಯ ನಂಬರ್‌ನಿಂದ, ಏರ್‌ಪೋರ್ಟ್ ಅಧಿಕಾರಿಗಳು ಎಂದು ಹೇಳಿ, ಆ ಮಹಿಳೆಗೆ ಕರೆ ಬಂದಿದ್ದು, ಅದ್ವಿಕ್ ಚೋಪ್ರಾ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದಾರೆ.
ಆದರೆ, ಅವರ ಬಳಿ ಹಣವಿಲ್ಲ ಹಾಕಿ ಎಂದು ಹೇಳಿದ್ದು 68,500 ರೂ ಅಗತ್ಯವಿದೆ. ಆ ನಂತರ 1.8 ಲಕ್ಷ ರೂ ಫೀ, 2.6 ಲಕ್ಷ ರೂ ಪ್ರೊಸೆಸಿಂಗ್ ಚಾರ್ಜ್ ಕೊಡಬೇಕು ಎಂದಿದ್ದಾರೆ.
ಚೋಪ್ರಾ ಮೇಲೆ ನಂಬಿಕೆಯಿಟ್ಟು, ನಾನು ಕೂಡಲೇ ಹಣ ಕಳುಹಿಸಿದ್ದು,ಬಳಿಕ ಮಹಿಳೆಗೆ ಅನುಮಾನ ಬಂದಿದ್ದು, ಕೂಡಲೇ ಚೋಪ್ರಾನನ್ನು ಸಂಪರ್ಕಿಸಲು ಪ್ರಯತ್ನಿಸಿದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿಂಡರ್‌ನಲ್ಲಿ ಪ್ರೊಫೈಲ್ ನ್ನು ಡಿಲೀಟ್ ಮಾಡಿದ್ದಾನೆ. ಟಿಂಡರ್ ಗ್ರಾಹಕ ಸೇವೆಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಮಹಿಳೆ ನಗರ ಪೊಲೀಸರ ಮೊರೆ ಹೋಗಿದ್ದಾಳೆ.
ನನ್ನನ್ನು ನೋಡಲು ಚೋಪ್ರಾ ಲಂಡನ್‌ನಿಂದ ಬರುತ್ತಿದ್ದಾರೆ. ಅವರಿಗಾದ ತೊಂದರೆ ತಿಳಿದು ಬಹಳ ಬೇಸರವಾಯಿತು. ಕರೆ ಮಾಡಿದವರ ಬಗ್ಗೆ ಯೋಚಿಸಲೇ ಇಲ್ಲ. ಅವರ ಮಾತನ್ನು ಕುರುಡಾಗಿ ನಂಬಿದೆ. ಏರ್‌ಪೋರ್ಟ್‌ನಿಂದ ಸುರಕ್ಷಿತವಾಗಿ ಬರಲಿ, ಆದಷ್ಟು ಬೇಗ ಭೇಟಿಯಾಗಬಹುದು ಹಣ ಕಳುಹಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
Previous Articleಬಿಸಿ ಮುಟ್ಟಿಸಲು ಮುಂದಾದ ಸರ್ಕಾರ
Next Article ಮಂತ್ರಿ ಮಹದೇವಪ್ಪ ಕೊಟ್ಟ ಎಚ್ಚರಿಕೆ