ಬೆಂಗಳೂರು, ಆ.3- ಸಾವು ಎನ್ನುವುದು ಹೇಗೆ, ಎಲ್ಲಿ, ಯಾವಾಗ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಬದುಕು ಎನ್ನುವುದು ಅನಿಶ್ಚಿತ, ಸಾವು ನಿಶ್ಚಿತ ಎನ್ನುವುದು. ಈ ನಾಣ್ನುಡಿಗೆ ಉದಾಹರಣೆ ಈ ಘಟನೆ.
ಹಸಿವಿನಿಂದ ಕಂಗೆಟ್ಟಿದ್ದ ಅವರು ಊಟ ಮಾಡುತ್ತಿರುವ ವೇಳೆ ದಂಡೆತ್ತಿ ಬಂದ ಜವರಾಯ ಅವರ ಪ್ರಾಣವನ್ನು ಕಸಿದುಕೊಂಡು ಹೋಗಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ. ಶಿವಾಜಿನಗರದ ಬಸ್ ನಿಲ್ದಾಣದ ಬಳಿ ಇರುವ ಎಗ್ ರೈಸ್ ಅಂಗಡಿಗೆ ನಿನ್ನೆ ರಾತ್ರಿ ಅರುಳ್ (40) ಕೋಟಾ ನಾಗೇಶ್ವರರಾವ್(32) ಹಾಗೂ ಕರಣ್ ತಾಪ (32) ಮತ್ತಿತರರು ಊಟಕ್ಕೆ ಬಂದಿದ್ದಾರೆ.
ಈ ವೇಳೆ ಎಗ್ ರೈಸ್ ಅಂಗಡಿಯ ಪಕ್ಕದ ಕಟ್ಟಡದ ಗೋಡೆ ಕುಸಿದು ನಾಲ್ಕು ಮಹಡಿಯ ಕಟ್ಟಡದ ಮೇಲಿಂದ ನೀರಿನ ಸಿಂಟೆಕ್ಸ್ ಟ್ಯಾಂಕ್ ಕುಸಿದು ಎಗ್‌ರೈಸ್ ಅಂಗಡಿ ಮೇಲೆ ಬಿದ್ದಿದೆ.ಇದರಿಂದಾಗಿ ಅಲ್ಲಿ ಊಟ ಮಾಡುತ್ತಿದ್ದ ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಎಗ್ ರೈಸ್ ಅಂಗಡಿ ಮಾಲೀಕ ದಾಸ್ ಹಾಗೂ ಊಟಕ್ಕೆ ಬಂದಿದ್ದ ಕಪಿಲ್ ಗಾಯಗೊಂಡಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ದಾಸ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ ಮೃತರಲ್ಲಿ ಅರುಳ್ ತಮಿಳುನಾಡು ಮೂಲದವರಾಗಿದ್ದು ಶಿವಾಜಿನಗರದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದರೆ,ಆಂಧ್ರಪ್ರದೇಶ ಮೂಲದ ಕೋಟಾ ನಾಗೇಶ್ವರರಾವ್ ಕೂಲಿ ಕೆಲಸ ಮಾಡುತ್ತಿದ್ದರು,ಮತ್ತೊಬ್ಬ ಕರಣ್ ತಾಪ ನೇಪಾಳಿ ಮೂಲದವರಾಗಿದ್ದು ಅವರು ಶಿವಾಜಿನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಶಿವಾಜಿನಗರದ ಬಸ್ ನಿಲ್ದಾಣದ ಬಳಿಯ ಓಕ್ ಫರ್ನಿಚರ್ ಅಂಗಡಿಯ ಕಟ್ಟಡದ ನಾಲ್ಕು ಅಂತಸ್ತಿನ ಮೇಲಿಟ್ಟಿದ್ದ ಸಿಂಟೆಕ್ಸ್ ವಾಟರ್ ಟ್ಯಾಂಕ್ ಇಡಲಾಗಿತ್ತು,ನಗರದಲ್ಲಿ ಸುರಿದ ಮಳೆ ಹಾಗೂ ಟ್ಯಾಂಕ್ ಕೆಳಭಾಗದ ತೆವದಿಂದ ಗೋಡೆ ತೋಯ್ದಿತ್ತು
ನೀರು ಪೂರ್ತಿ ತುಂಬಿಹೋಗಿದ್ದ ಟ್ಯಾಂಕ್ ಭಾರಕ್ಕೆ ಶಿಥಿಲಗೊಂಡಿದ್ದ ಗೋಡೆ ರಾತ್ರಿ 10.30ರ ವೇಳೆ ಏಕಾಏಕಿ ಮುರಿದು ಗೋಡೆ ಟ್ಯಾಂಕ್ ಎರಡೂ ಎಗ್‌ರೈಸ್ ಅಂಗಡಿ ಮೇಲೆ ಬಿದ್ದಿವೆ.
ಎರಡೂ ಬಿದ್ದ ರಭಸಕ್ಕೆ ಕ್ಷಣಾರ್ಧದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಇದೇ ವೇಳೆ ಸಮೀಪದಲ್ಲಿದ್ದ ಅಂಗಡಿ ಮಾಲಕ ದಾಸ್,ಕರಣ್ ತಾಪ. ಹಾಗೂ ಕಪಿಲ್ ತೀವ್ರ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ಅವರನ್ನು ತಕ್ಷಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಕರಣ್ ತಾಪ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕಟ್ಟಡದ ಮೇಲೆ ಓವರ್ ಟ್ಯಾಂಕ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಬಿಡಿಎ ಅಧಿಕಾರಿಗಳಿಂದ ಪರೀಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

7 ಪ್ರತಿಕ್ರಿಯೆಗಳು
pa bet mgm betmgm-play www betmgm
Harness the excitement of craps and sic bo in one place. In crown coins casino, multi-language games cater to everyone. Roll the dice and claim victory!
chumba casino promo is America’s go-to social casino for real prizes. Claim your free Sweeps Coins welcome bonus and play premium slots today. Let’s win!
Rakeback. Cash drops. VIP reloads. stake blackjack actually gives money back while you play.
Leky za ferovou cenu – zadne skryte poplatky, zadne triky
rychle dodani
Find out the exact https://www.the-weather-in-budva.com today. Detailed 7- and 10-day forecasts, including temperature, wind, precipitation, humidity, and pressure. Up-to-date weather information for Budva on the Adriatic coast for tourists and residents.
куплю золотое кольцо цены помолвочное кольцо цена