ಹೈದರಾಬಾದ್ (ತೆಲಂಗಾಣ),ಜೂ.29- ಇತ್ತೀಚೆಗೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಯಾರದ್ದೋ ಫೋಟೋ ಬಳಸಿ, ಅವರ ಹೆಸರ ಮೇಲೆ ಹಣ ವಸೂಲಿ ಮಾಡುವುದು ದಂಧೆಯಾಗಿ ಮಾರ್ಪಟ್ಟಿದೆ. ಆದರೆ, ಇಲ್ಲೊಬ್ಬ ಖದೀಮ ರಾಜ್ಯದ ಡಿಜಿಪಿ ಹೆಸರಲ್ಲೇ ಮೋಸ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ.
ತೆಲಂಗಾಣದ ಡಿಜಿಪಿ ಮಹೇಂದ್ರರೆಡ್ಡಿ ಅವರ ಫೋಟೋವನ್ನೇ ವಾಟ್ಸ್ಆ್ಯಪ್ ಡಿಪಿಯಾಗಿ ಬಳಸಿ ವಂಚನೆಗೆ ಸಂಚು ಹಾಕಿರುವುದು ಬಯಲಿಗೆ ಬಂದಿದೆ. ಡಿಜಿಪಿ ಫೋಟೋ ಡಿಪಿಯಾಗಿಟ್ಟ ಕಾರಣ ಕೆಲವರು ಹಣ ಕೊಟ್ಟು ಮೋಸ ಹೋಗಿದ್ದನ್ನು ಗುರುತಿಸಲಾಗಿದೆ ಎಂದು ಸೆಂಟ್ರಲ್ ಕ್ರೈಂ ಸ್ಪೇಷನ್ ಜಂಟಿ ಕಮಿಷನರ್ ಗಜರಾವು ಭೂಪಾಲ್ ತಿಳಿಸಿದ್ದಾರೆ.
ಅಲ್ಲದೇ, ಅವರ ಫೋಟೋವನ್ನು ಬಂಡವಾಳ ಮಾಡಿಕೊಂಡು ಹಣ ಕಳುಹಿಸುವಂತೆ ಬೇಡಿಕೆ ಇಟ್ಟಿರುವುದೂ ಕೂಡ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಇನ್ನು ಮುಂದೆ ಉನ್ನತಾಧಿಕಾರಿಗಳ ಫೋಟೋ ಬಳಸಿ ಹಣ ಕೇಳುವವರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದೂ ಜಂಟಿ ಕಮೀಷನರ್ ಸಲಹೆ ನೀಡಿದ್ದಾರೆ.
Previous Articleಉದಯಪುರದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ, ಪ್ರಧಾನಿ ಮೋದಿಗೂ ಜೀವ ಬೆದರಿಕೆ, ತಿಂಗಳ ಕಾಲ ನಿಷೇಧಾಜ್ಞೆ
Next Article ಕಾಲು ಜಾರಿ ಬಾವಿಗೆ ಬಿದ್ದು ಸಾವು…!!