ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬೆಲೆ ಏರಿಕೆಯಿಂದ ನಲುಗುತ್ತಿರುವ ದೇಶವಾಸಿಗಳ ಧ್ವನಿ ಎಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ರೇಲಿಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಹುಲ್ ಅವರ ಜನಪರ ಕಾಳಜಿಯನ್ನು ಉಲ್ಲೇಖಿಸಿ ಅವರನ್ನು ಅಭಿನಂದಿಸಿದರು ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಆಕ್ರೋಶದ ಪ್ರತಿಭಟನೆಗೆ ಜನಸಾಗರವೇ ಜಮಾವಣೆಗೊಂಡಿತ್ತು ಎನ್ನಲಾಗಿದೆ.
ಬೆಲೆ ಏರಿಕೆಯ ವಿರುದ್ದದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸೇರಿದಂತೆ ಹಲವು ಗಣ್ಯರು ಜೊತೆಯಾದರು.