ಬೆಂಗಳೂರು, ಜ.16- ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಜಾರಿಗೊಳಿಸಿರುವ ಆಸ್ತಿ ತೆರಿಗೆ ಪದ್ಧತಿ ನಾಗರಿಕರಿಗೆ ಹೊರೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.ಹೀಗಾಗಿ ಇದನ್ನು ಜನಸ್ನೇಹಿ ಹಾಗೂ ಸರಳವಾಗಿ ಪರಿಷ್ಕರಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2020 ರಲ್ಲಿ ಬಿಜೆಪಿ ಸರ್ಕಾರ ರಚಿಸಿದ ಬಿಬಿಎಂಪಿ ಕಾಯ್ದೆಯಿಂದ ಆಸ್ತಿ ತೆರಿಗೆ ಮತ್ತು ದಂಡದ ಪ್ರಮಾಣ ದುಬಾರಿಯಾಗಿದೆ ಎಂಬ ಆರೋಪಗಳಿವೆ. ಹಲವು ಕ್ಷೇತ್ರಗಳಲ್ಲಿ ಜನಸ್ಪಂದನ ನಡೆಸಿದಾಗ ಈ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಬೆಂಗಳೂರಿನ ಜನರು ಸಮರ್ಪಕವಾದ ಆಸ್ತಿ ತೆರಿಗೆ ಪಾವತಿಸಬೇಕು. ಇದರಿಂದ ಮಾತ್ರ ಅಭಿವೃದ್ಧಿಪಡಿಸಲು ಸಾಧ್ಯ. 3 ಅಂತಸ್ತಿನ ಮನೆ ಕಟ್ಟಿ, 1 ಅಂತಸ್ತಿಗೆ ಮಾತ್ರ ತೆರಿಗೆ ಕಟ್ಟಿದರೆ ಅದು ಸರಿಯಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ದುಬಾರಿಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದೇ ರೀತಿ ಬಿಬಿಎಂಪಿ ನೂತನ ಕಾಯ್ದೆಯಲ್ಲಿನ ದುಬಾರಿ ತೆರಿಗೆ ವ್ಯವಸ್ಥೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿಯವರು ಪತ್ರ ಬರೆದಿದ್ದಾರೆ. ಇದರ ಪರಿಷ್ಕರಣೆ ಮಾಡುವ ಅಗತ್ಯವಿದೆ. 30-40 ಚದರ ಅಡಿ ವಿಸ್ತೀರ್ಣದ ನಿವೇಶನದ ಮನೆಗಳಿಗೆ, ಶೆಡ್‍ಗಳಿಗೆ ಸೂಚನೆ ಮಾಡಲಾಗಿದೆ. ಕಂದಾಯ ಮನ್ನಾ ಮಾಡಿ ಬಡವರಿಗೆ ಸಹಾಯವಾಗುವ ತೆರಿಗೆ ಪದ್ಧತಿಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಮೂರ್ನಾಲ್ಕು ದಿನದಲ್ಲೇ ತೆರಿಗೆ ಕಟ್ಟಿ ಎಂದು ಒತ್ತಡ ಹೇರುವುದನ್ನು ತಪ್ಪಿಸಲಾಗುವುದು ಎಂದರು.
ಎಲ್ಲರನ್ನೂ ತೆರಿಗೆ ವ್ಯಾಪ್ತಿಗೊಳಪಡಿಸಲಾಗುವುದು. ಮನೆಬಾಗಿಲಿಗೆ ಸಮರ್ಪಕ ಆಸ್ತಿ ದಾಖಲೆಗಳನ್ನು ತಲುಪಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ವಸತಿ ಸಮಸ್ಯೆ ಬಗೆಹರಿಸಿ ಆದ್ಯತೆ ನೀಡಲಾಗುವುದು. ಎಲ್ಲವನ್ನೂ ಉಚಿತವಾಗಿ ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಫಲಾನುಭವಿಗಳ ವಂತಿಗೆಗೂ ಅವಕಾಶ ಕಲ್ಪಿಸಲಾಗಿದೆ.ಹಿಂದೆ 1 ಲಕ್ಷ ಮನೆ ಘೋಷಣೆ ಮಾಡಲಾಗಿತ್ತು. ಆದರೆ ಒಂದು ಮನೆಯನ್ನೂ ಕೊಟ್ಟಿಲ್ಲ. ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗುವ ಅರ್ಜಿಗಳನ್ನು ಪರಿಶೀಲಿಸಿ ವಸತಿ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಫುಟ್‍ಪಾತ್ ವ್ಯಾಪಾರಿಗಳಿಗೆ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ರಸ್ತೆ ಮಧ್ಯೆ ಖಾಯಂ ಅಂಗಡಿ ತೆರೆಯುವುದರ ಬದಲಾಗಿ ತಳ್ಳುವ ಗಾಡಿಯಲ್ಲಿ ರಸ್ತೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರೆ ಆಕ್ಷೇಪಣೆಗಳಿಲ್ಲ. ಫುಟ್‍ಪಾತ್ ತೆರವಿಗೆ ಸಂಬಂಧಪಟ್ಟಂತೆ ಹೈಕೋರ್ಟ್‍ನ ಆದೇಶವಿದೆ. ಒತ್ತುವರಿ ತೆರವುಗೊಳಿಸದೇ ಇದ್ದರೆ ಬಿಬಿಎಂಪಿ ಆಯುಕ್ತರು ಜೈಲಿಗೆ ಹೋಗಬೇಕಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಶೀಘ್ರವೇ ನೂತನ ಜಾಹಿರಾತು ನೀತಿಯನ್ನು ಜಾರಿಗೆ ತರಲಾಗುವುದು. ಈಗಾಗಲೇ ಫ್ಲೆಕ್ಸ್, ಬ್ಯಾನರ್‍ಗಳನ್ನು ನಿಷೇಸಲಾಗಿದೆ. ನಿಯಮ ಉಲ್ಲಂಘಿಸಿ ಯಾರೇ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಿದರೂ, ಅದರಲ್ಲಿ ನನ್ನ ಫೋಟೋ ಹಾಕಿದ್ದರೂ ಕೂಡ ಕೇಸು ದಾಖಲಿಸಿ, ದಂಡ ವಿಸಿ ಎಂದು ಹೇಳಿದರು. ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಇನ್ನು ಕಸ ವಿಲೇವಾರಿಯಲ್ಲಂತೂ ದೊಡ್ಡ ಗ್ಯಾಂಗೇ ಇದೆ. ಈ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.