ಬೆಂಗಳೂರು,ಮೇ.23- ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 10 ಲಕ್ಷ ಬೆಲೆಯ ನಿಷೇದಿತ ಮಾದಕ ವಸ್ತುವಾದ 5 ಕೆ.ಜಿ ಗಾಂಜಾ, 260 ಆಶಿಶ್ ಆಯಿಲ್ ಮತ್ತು 20 ಎಲ್.ಎಸ್.ಡಿ ಸ್ಟ್ರಿಪ್ಸ್ ,3 ಮೊಬೈಲ್ ಗಳು, ಹಾಗು ಒಂದು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಿಂದ ಕೆಜಿ ಗಟ್ಟಿಗಟ್ಟಲೇ ಗಾಂಜಾವನ್ನು ಕಡಿಮೆ ಬೆಲೆಗೆ ನಗರಕ್ಕೆ ತರಿಸಿಕೊಂಡು ಪರಿಚಯಸ್ಥ ಗ್ರಾಹಕರುಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು 10 ಗ್ರಾಂ ಗೆ 1, 500 ರೂ ನಿಂದ , 2 ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ, ಆಶಿಶ್ ಆಯಿಲ್ ಅನ್ನು 1 ಗ್ರಾಂ ಗೆ 1ಸಾವಿರದಂತೆ ಹಾಗು 1 ಎಸ್‍ಎಸ್‍ಡಿ ಸ್ಟ್ರಿಪ್ ನ್ನು 6ಸಾವಿರ ರೂಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಕುಮಾರಸ್ವಾಮಿ ಲೇಔಟ್ ನಲ್ಲಿ ಆರೋಪಿಗಳು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಆರೋಪಿಗಳ ವಿರುದ್ದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
Previous Articleಬಿ.ಸಿ.ನಾಗೇಶ್ ಏನಿದೆಲ್ಲಾ…?
Next Article ಬಾಡಿಗೆಗಿದ್ದ ಯುವತಿ ಮೇಲೆ ಮನೆ ಮಾಲೀಕನಿಂದಲೇ ಅತ್ಯಾಚಾರ