ಮಡಿಕೇರಿ: ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂ ಕಂಪನ ಸಂಭವಿಸಿದೆ.
ಮಂಗಳವಾರ ಮುಂಜಾನೆ ಸುಮಾರು ಎರಡು ಸೆಕೆಂಡ್ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಕಳೆದ ಒಂದು ವಾರದಿಂದ ಇದೀಗ ಮೂರನೆ ಬಾರಿ ಭೂಕಂಪನದ ಅನುಭವವಾಗಿದೆ
ಕರಿಕೆ, ಪೆರಾಜೆ ಮತ್ತು ಭಾಗಮಂಡಲದ ಕರ್ಣಂಗೇರಿಯಲ್ಲಿ ಭೂಕಂಪನದ ಅನುಭವವಾಗಿದೆ.
ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಮತ್ತು ಕಲ್ಲುಗುಂಡಿಯಲ್ಲಿ ಕೂಡ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಸತತವಾಗಿ ಭೂಕಂಪನ ಸಂಭವಿಸುತ್ತಿರುವ ಕಾರಣ ಜನರು ಭಯಭೀತರಾಗಿದ್ದಾರೆ.