ಇಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಕಣದಲ್ಲಿ ಒಟ್ಟು ಒಟ್ಟು 19ಮಂದಿ ಅಭ್ಯರ್ಥಿಗಳಿದ್ದು, ಮೂರು ಪ್ರಮುಖ ರಾಜಕೀಯ ಪಕ್ಷಗಳೂ ಪ್ರತಿಷ್ಠೆಯ ಕಣವಾಗಿದೆ.ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಬಿಜೆಪಿಯಿಂದ ಮೈ.ವಿ.ರವಿಶಂಕರ್, ಕಾಂಗ್ರೆಸ್ ನಿಂದ ಮಧು ಜಿ.ಮಾದೇಗೌಡ, ಜೆಡಿಎಸ್ ನಿಂದ ಹೆಚ್.ಕೆ.ರಾಮು ಸ್ಪರ್ಧೆ.
ಬಿಜೆಪಿ ಮೈ.ವಿ.ರವಿಶಂಕರ್ ಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರ ಜೊತೆಗೆ ರೈತಸಂಘದಿಂದ ಪ್ರಸನ್ನ ಎನ್.ಗೌಡ, ವಾಟಾಳ್ ನಾಗರಾಜ್, ವಿನಯ್ ಸೇರಿ ಹಲವರು ಕಣದಲ್ಲಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಮೈ.ವಿ ರವಿಶಂಕರ್ ಹಾಗು
ಇನ್ನೂ ಹಾಲಿ ಕ್ಷೇತ್ರವನ್ನ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ಪಡುತ್ತಿದೆ.ಬಂಡಾಯ, ಅಸಮಾಧಾನದ ನಡುವೆ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸಿ ಮತದಾನ ಮುಗಿದಿದೆ. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ.ರಾಮು, ಈ ಕ್ಷೇತ್ರದಲ್ಲಿ ಒಮ್ಮೆಯೂ ಗೆಲ್ಲದ ಕಾಂಗ್ರೆಸ್, ಮೊದಲ ಬಾರಿಗೆ ಅಧಿಕಾರ ಹಿಡಿಯಲು ಕಾತುರದಲ್ಲಿದ್ದಾರೆ. ಈ ನಡುವೆ
ಗೆಲುವು, ಸೋಲಿನ ಅಭ್ಯರ್ಥಿಗಳಿಗೆ ಪಕ್ಷೇತರರು ಡೇಂಜರ್ ಆಗಿ ಪರಿಣಮಿಸಲಿದ್ದಾರೆ.