ಬೆಂಗಳೂರು- ರಾಜ್ಯ ವಿಧಾನಸಭೆಯ ಚುನಾವಣೆಗೆ ಅಧಿಸೂಚನೆ ಹೊರ ಬಿದ್ದಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಹುರಿಯಾಳುಗಳು ತಮ್ಮ ಬೆಂಬಲಿಗರ ಪಡೆ, ಅಭಿಮಾನಿಗಳು, ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ.
ಚುನಾವಣಾ ಅಧಿಸೂಚನೆ ಹೊರ ಬೀಳುತ್ತಿದ್ದಂತೆಯೇ ಎಲ್ಲ 224 ಕ್ಷೇತ್ರಗಳಲ್ಲೂ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಏಪ್ರಿಲ್ 20ರವರೆಗೂ ಸಲ್ಲಿಸಬಹುದಾಗಿದೆ. ಏಪ್ರಿಲ್ 14 ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಪ್ರಯುಕ್ತ ರಜೆ ಇದೆ, ಹಾಗೆಯೇ 16 ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಈ ಎರಡು ದಿನ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.
ನಾಮಪತ್ರಗಳ ಪರಿಶೀಲನಾ ಕಾರ್ಯ ಏಪ್ರಿಲ್ 21 ರಂದು ನಡೆಯಲಿದ್ದು, ಏಪ್ರಿಲ್ 24, ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ.
ಈ ನಡುವೆ ನಾಮಪತ್ರ ರಾಜ್ಯದ ಪ್ರಮುಖ ದೇವಾಲಯಗಳು, ಪ್ರಭಾವಿ ಜ್ಯೋತಿಷಿಗಳು, ಲೆಕ್ಕಪರಿಶೋಧಕರು ತುಂಬಾ ಬ್ಯುಸಿಯಾಗಿದ್ದಾರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಯಾವ ಸಮಯದಲ್ಲಿ ನಾಮಪತ್ರ ಸಲ್ಲಿಸಬೇಕು. ಎಷ್ಟು ಸೆಟ್ ಗಳಲ್ಲಿ ನಾಮಪತ್ರ ಹಾಕಬೇಕು, ನಾಮಪತ್ರಕ್ಕೆ ಸೂಚಕರಾಗಿ ಯಾರ ಹೆಸರು ಹಾಕಿದರೆ ಅದೃಷ್ಟ, ಎಂಬ ವಿಷಯಗಳ ಕುರಿತು ತಲೆ ಕೆಡಿಸಿಕೊಂಡಿದ್ದಾರೆ. ತಮ್ಮ ಜಾತಕ, ಕುಂಡಲಿ ಹಿಡಿದು ಜ್ಯೋತಿಷಿಗಳ ಮನೆ ಬಾಗಿಲು ಕಾಯುತ್ತಿದ್ದಾರೆ.
ಜ್ಯೋತಿಷಿಗಳು ಕೇವಲ ಅಭ್ಯರ್ಥಿಗಳ ಜಾತಕ ಕುಂಡಲಿ ಮಾತ್ರವಲ್ಲ ಅವರ ಕುಟುಂಬ ಸದಸ್ಯರು, ಮತ್ತು ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕುವವರ ಜಾತಕಗಳ ವಿವರಗಳನ್ನು ಹಿಡಿದು ರಾಶಿ ನಕ್ಷತ್ರ ನೋಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಯಾವ ಅಭ್ಯರ್ಥಿಗೆ ಯಾವ ಸಮಯ ಪ್ರಶಸ್ತಿ ಪ್ರಶಸ್ತವಾಗಿದೆ. ಯಾವ ದಿನದಂದು ನಾಮಪತ್ರ ಸಲ್ಲಿಸಬೇಕು ನಾಮಪತ್ರ ಸಲ್ಲಿಕೆಗೂ ಮುನ್ನ ಯಾವ ಪೂಜೆ, ಪುನಸ್ಕಾರ ಹೋಮ ,ಹವನಗಳನ್ನ ನಡೆಸಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದಕ್ಕಾಗಿ ಅಭ್ಯರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಜ್ಯೋತಿಷಿಗಳ ಮನೆಯ ಮುಂದೆ ಕಾದು ಕುಳಿತಿದ್ದಾರೆ.
ಕೆಲವು ದೇವಾಲಯಗಳು ಅದೃಷ್ಟದ ಬಾಗಿಲು ತೆರೆಯುತ್ತವೆ ಎಂಬ ನಂಬಿಕೆ ಅನೇಕ ರಾಜಕಾರಣಿಗಳಲ್ಲಿದೆ ಆದರಲ್ಲೂ ಪ್ರಮುಖವಾಗಿ ಕುರುಡುಮಲೆ ಗಣೇಶ, ಬಸವನಗುಡಿಯ ದೊಡ್ಡ ಗಣೇಶ, ಮೈಸೂರಿನ ಚಾಮುಂಡೇಶ್ವರಿ, ಸವದತ್ತಿಯ ಎಲ್ಲಮ್ಮ, ಧರ್ಮಸ್ಥಳದ ಮಂಜುನಾಥ, ಮಲೆ ಮಹದೇಶ್ವರ, ಏಳು ಕೋಟಿ ಮೈಲಾರ, ಕುದ್ರೋಳಿಯ ಈಶ್ವರ, ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ, ಹೀಗೆ ಹಲವಾರು ದೇವಾಲಯ ಬಂದೇನವಾಸ್ ತವಕಲ್ ಮಸ್ತಾನ್, ಉಳ್ಳಾಲ, ಮುಳಬಾಗಿಲು ದರ್ಗಾ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರಿಂದ ಪ್ರಸಾದ ರೂಪದಲ್ಲಿ ಅನುಗ್ರಹ ಪಡೆಯಲು ಪ್ರಯತ್ನಿಸುತ್ತಿದ್ದಾರೆ.ಹೀಗಾಗಿ ರಾಜ್ಯದ ಪ್ರಮುಖ ದೇವಾಲಯಗಳು ರಾಜಕಾರಣಿಗಳು ಮತ್ತು ಅವರ ಕುಟುಂಬ ಸದಸ್ಯರಿಂದ ತುಂಬಿ ತುಳುಕುತ್ತಿದೆ .
ಇವರೊಂದಿಗೆ ಅವರ ಅಭಿಮಾನಿಗಳು, ಮತ್ತು ಬೆಂಬಲಿಗರು ಕೂಡ ವಿಶೇಷ ಪೂಜೆ ಪುನಸ್ಕಾರಗಳಲ್ಲಿ ನಿರತವಾಗಿದ್ದು ಪ್ರಾರ್ಥನಾ ಮಂದಿರ, ದರ್ಗಾ, ದೇವಾಲಯಗಳಂತೂ ಅತ್ಯಂತ ಬಿರುಸಿನ ಚಟುವಟಿಕೆಗಳ ತಾಣವಾಗಿ ಪರಿಣಮಿಸಿವೆ.
ಮತ್ತೊಂದೆಡೆ ರಾಜ್ಯದ ಬಹುತೇಕ ಎಲ್ಲಾ ಆಂತರಿಕ ಲೆಕ್ಕ ಪರಿಶೋಧಕರುಗಳ ಕಚೇರಿಗಳು ಕೂಡ ಬಿರುಸಿನ ಚಟುವಟಿಕೆಯ ಕೇಂದ್ರಗಳಾಗಿವೆ. ಅಭ್ಯರ್ಥಿಗಳು ತಮ್ಮ ನಾಮಪತ್ರದ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆದಾಯ ವಿವರಗಳು, ತಮ್ಮ ವಿರುದ್ಧ ಬರುವ ಪ್ರಕರಣಗಳ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ಅಲ್ಲದೆ ಚುನಾವಣೆ ಮುಗಿಯುವವರೆಗೆ ಪ್ರತಿನಿತ್ಯ ತಾವು ಮತ್ತು ತಮ್ಮ ಪರವಾಗಿ ಬೆಂಬಲಿಗರು ಅಭಿಮಾನಿಗಳು ಕುಟುಂಬ ಸದಸ್ಯರು ಮಾಡುವ ಖರ್ಚು ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಹೀಗಾಗಿ ,ಲೆಕ್ಕ ಪರಿಶೋಧಕರು ಪ್ರತಿನಿತ್ಯ ಗುರುವಾರಗಳನ್ನು ಸಿದ್ಧಪಡಿಸಿ ಕೊಡಬೇಕಾಗುತ್ತದೆ ಹೀಗಾಗಿ ಲೆಕ್ಕ ಪರಿಶೋಧಕರ ಕಚೇರಿಗಳಂತೂ ಬಿರುಸಿನ ಚಟುವಟಿಕೆಗಳ ತಾಣವಾಗಿ ಪರಿಣಮಿಸಿವೆ.
ಇನ್ನು ಅಭ್ಯರ್ಥಿಗಳ ಪರವಾಗಿ ಪ್ರತಿನಿತ್ಯದ ಪ್ರಚಾರದಲ್ಲಿ ಪಾಲ್ಗೊಳ್ಳಲು ಹಲವಾರು ಮಂದಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ, ಕೂಡ ಭಾರೀ ಬೇಡಿಕೆ ಬಂದಿದೆ. ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಹೋಟೆಲ್ ಗಳು ಬಾರ್ ಮತ್ತು ಮಧ್ಯದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಭರಾಟೆಯಿಂದ ನಡೆಯುತ್ತಿದೆ.
12 ಪ್ರತಿಕ್ರಿಯೆಗಳು
Как оказалось, купить диплом кандидата наук не так уж и сложно
militarymuster.ca/forum/search.php
авито диплом авито диплом .
где можно купить диплом окончание arusak-diploms.ru .
Всё, что нужно знать о покупке аттестата о среднем образовании
ya.6bb.ru/viewtopic.php?id=3558#p5961
купить диплом психиатра [url=https://server-diploms.ru/]купить диплом психиатра[/url] .
диплом купить отзывы [url=https://arusak-diploms.ru/]диплом купить отзывы[/url] .
купить диплом колледжа в казани [url=https://landik-diploms.ru/]landik-diploms.ru[/url] .
купить диплом техникума в красноярске [url=https://orik-diploms.ru/]orik-diploms.ru[/url] .
купить диплом пту в спб [url=https://arusak-diploms.ru/]arusak-diploms.ru[/url] .
Купить диплом в Ногинске
kyc-diplom.com/geography/noginsk.html
Официальное получение диплома техникума с упрощенным обучением в Москве
Купить диплом о среднем образовании в Москве и любом другом городе