ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಡಾ. ಶಂಕರೇಗೌಡ ಅವರಿಗೆ ನಿನ್ನೆ(ಸೋಮವಾರ) ರಾತ್ರಿ ಲಘು ಹೃದಯಾಘಾತ ಸಂಭವಿಸಿದೆ.
ಹೃದಯಾಘಾತಕ್ಕೊಳಗಾದ ಡಾ.ಶಂಕರೇಗೌಡರನ್ನು ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್ ಆಗಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಡಾ. ಶಂಕರೇಗೌಡ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ತಿಳಿಸಿದ್ದಾರೆ. ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆಗಳಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಸಕ್ಕರೆ ಜಿಲ್ಲೆಯಲ್ಲಿ ಚರ್ಮ ರೋಗ ವೈದ್ಯ ಶಂಕರೇಗೌಡ್ರು ಫುಲ್ ಫೇಮಸ್ ಆಗಿದ್ದಾರೆ. ಇವರು ಕೇವಲ ತಮ್ಮ ಚಿಕಿತ್ಸೆಯ ಶುಲ್ಕವಾಗಿ ತಮ್ಮ ಮಂಡ್ಯದಲ್ಲಿರುವ ತಾರಾ ಕ್ಲೀನಿಕ್ ನಲ್ಲಿ 5 ರುಪಾಯಿ ಪಡೆದ್ರೆ ತಮ್ಮ ಊರಾದ ಶಿವಳ್ಳಿಗೆ ಬಂದ ರೋಗಿಗಳಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಾರೆ. ಇದರಿಂದಾಗಿಯೇ ಇವ್ರು ಮಂಡ್ಯ ಜಿಲ್ಲೆಯಲ್ಲಿ ಐದ್ರುಪಾಯಿ ಡಾಕ್ಟ್ರು ಅಂತಲೇ ಪ್ರಸಿದ್ದಿ ಪಡೆದಿದ್ದಾರೆ.