ಮೈಸೂರು,ಆ.8:
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿರುವ ಎರಡು ರಾಜಕೀಯ ವಿದ್ಯಮಾನಗಳು ದೇಶದ ಗಮನ ಸೆಳೆಯುತ್ತಿವೆ
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದು ಶನಿವಾರ ಮೈಸೂರಿನಲ್ಲಿ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆ ಅಂತ್ಯಗೊಳಿಸುತ್ತಿದ್ದಾರೆ
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಜನಾಂದೋಲನ ಯಾತ್ರೆ ಡೀತಿದ್ದು ನಡೆಸುತ್ತಿದ್ದು ನಾಳೆ ಮೈಸೂರಿನಲ್ಲಿ ಬೃಹತ್ ಸಮಾವೇಶ ಕನ್ನಡತಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಅಕ್ರಮಗಳ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ.
ಎರಡು ದಿನದ ಅಂತರದಲ್ಲಿ ಎರಡು ಸಮಾವೇಶಗಳು ನಡೆಯುತ್ತಿರುವುದು ಕುತೂಹಲ ಮೂಡಿಸಿದೆ ಎರಡು ಸಮಾವೇಶಗಳು ಮೈಸೂರಿನ
ಮಹಾರಾಜ ಕಾಲೇಜು ಮೈದಾನದ ಒಂದೇ ವೇದಿಕೆಯಲ್ಲಿ ನಡೆಯುತ್ತಿರುವುದು ಗಮನಾರ್ಹ.
ಆಗಸ್ಟ್ 9ರಂದು ಕಾಂಗ್ರೆಸ್ ಜನಾಂದೋಲನ ಮತ್ತು ಆಗಸ್ಟ್ 10ರಂದು ‘ಮೈಸೂರು ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯುತ್ತಿರುವುದು, ಪೆಂಡಾಲ್ ಗುತ್ತಿಗೆ ಪಡೆದಿರುವವರ ಪೀಕಲಾಟಕ್ಕೆ ಕಾರಣವಾಗಿದೆ.
ಈ ಮೈದಾನದಲ್ಲಿ ವೇದಿಕೆ ಸಿದ್ಧಪಡಿಸಿ ಪೆಂಡಾಲ್ ಹಾಕಿಕೊಡುವಂತೆ ಕಾಂಗ್ರೆಸ್‌ನವರು ಶರೀಫ್ ಎಂಬ ಗುತ್ತಿಗೆದಾರರಿಗೆ ತಿಳಿಸಿದ್ದರು.
ಇದಾದ ಬಳಿಕ ಬಿಜೆಪಿಯವರು ಅವರನ್ನು ಸಂಪರ್ಕಿಸಿ, ನಾವೂ ಮರುದಿನ ಅಲ್ಲೇ ಸಮಾವೇಶ ನಡೆಸುತ್ತೇವೆ; ಅದೇ ಪೆಂಡಾಲ್ ಹಾಗೂ ವೇದಿಕೆ ಬಿಟ್ಟುಕೊಡಿ’ ಎಂದು ಕೇಳಿಕೊಂಡಿದ್ದರು. ಇದರಿಂದ ಪೆಂಡಾಲ್ ಗುತ್ತಿಗೆದಾರ ಅತ್ಯಂತ ಸಂತೋಷಪಟ್ಟಿದ್ದರು ಕಾರಣ ಒಂದು ಬಾರಿ ಹಾಕಿದ ಪೆಂಡಾಲ್ ನಲ್ಲಿ ಎರಡು ಕಾರ್ಯಕ್ರಮ ನಡೆಯುತ್ತಿದ್ದು ಇಬ್ಬರೂ ಕೂಡ ಹಣ ನೀಡಲಿದ್ದಾರೆ ಹೀಗಾಗಿ ಇದರಿಂದ ತಮಗೆ ಕೊಂಚ ಹೆಚ್ಚಿನ ಪ್ರಮಾಣದ ಲಾಭ ಬರಲಿದೆ ಎಂದು ನಿರೀಕ್ಷಿಸಿದ್ದರು
ಆದರೆ, ಈಗ ಎರಡೂ ಪಕ್ಷದವರು ಸಂಪೂರ್ಣ ವೆಚ್ಚ ಕೊಡಲು ನಿರಾಕರಿಸುತ್ತಿದ್ದಾರೆ. ಅವರ ಬಳಿಯೂ ಹಣ ಪಡೆದುಕೊಳ್ಳುತ್ತೀರಲ್ಲಾ, ನಾವೇಕೆ ಸಂಪೂರ್ಣ ವೆಚ್ಚ ಕೊಡಬೇಕು ಎಂದು ಎರಡು ಪಕ್ಷದವರೂ ಗುತ್ತಿಗೆದಾರರನ್ನು ಕೇಳುತ್ತಿದ್ದಾರೆ.
ಒಟ್ಟಾರೆ ಪೆಂಡಾಲ್ ನಿರ್ಮಾಣಕ್ಕೆ ತಗುಲುವ ವೆಚ್ಚ, ಕುರ್ಚಿ ಧ್ವನಿ ಬರಬೇಕಾ ಎಲ್ಇಡಿ ಪರದೆ ಎಲ್ಲದಕ್ಕೂ ಒಟ್ಟಾರೆ ಮೊತ್ತ ನಿಗದಿಪಡಿಸಿ ಶೇಕಡ 50ರಷ್ಟು ನಮ್ಮಿಂದ ಪಡೆಯಿರಿ ಉಳಿದ ಐವತ್ತರಷ್ಟು ಅವರಿಂದ ಪಡೆಯಿರಿ ಎಂದು ಎರಡು ಪಕ್ಷಗಳ ಸಂಘಟಕರು ಹೇಳುತ್ತಿರುವುದರಿಂದ ಗುತ್ತಿಗೆದಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೆಂಡಾಲ್ ಮಾತ್ರವೇ ಆಗಿದ್ದರೆ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆದರೆ, ಧ್ವನಿವರ್ಧಕಗಳು, ವಿದ್ಯುತ್ ದೀಪಗಳ ವ್ಯವಸ್ಥೆ, ಫ್ಯಾನ್‌ಗಳು, ಜನರೇಟರ್, ಎಲ್‌ಇಡಿ ಪರದೆಗಳು, ಎಲ್‌ಇಡಿ ಟಿವಿಗಳು ಮೊದಲಾದವುಗಳನ್ನು ನಾನು ಬೇರೆಯವರಿಂದ ಬಾಡಿಗೆಗೆ ಪಡೆದುಕೊಂಡಿದ್ದೇನೆ. ಅರ್ಧ ಬಾಡಿಗೆಗೆ ಅವರು ಒಪ್ಪುವುದಿಲ್ಲ. ಆದ್ದರಿಂದ ಗರಿಷ್ಠ ವೆಚ್ಚ ಭರಿಸುವಂತೆ ಎರಡೂ ಪಕ್ಷದವರಿಗೆ ಕೋರಿಕೊಂಡಿದ್ದೇನೆ, ಏನು ಮಾಡುತ್ತಾರೋ ನೋಡಬೇಕು ಎನ್ನುತ್ತಾರೆ ಗುತ್ತಿಗೆದಾರ
Previous Articleಮತ್ತೊಂದು ಪಾದಯಾತ್ರೆಗೆ ಸಜ್ಜಾಗುತ್ತಿರುವ ಬಿಜೆಪಿ.
Next Article ವಾಹನಗಳ ಮೇಲೆ ಲೇಸರ್ ಗನ್ ಕಣ್ಣು..