ಹುಬ್ಬಳ್ಳಿ: ಸರ್ಕಾರದ ಬಗ್ಗೆಯಾಗಲಿ ಅಥವ ಮುಖ್ಯಮಂತ್ರಿಗಳ ಬಗ್ಗೆಯಾಗಲಿ ಏನಾದ್ರೂ ಮಾತಾಡೋದಿದ್ರೆ ಮಾತನಾಡಲಿ.
ಅದನ್ನು ಬಿಟ್ಟು ಸಂಘಪರಿವಾರದ ವಿರುದ್ಧ ಅನಗತ್ಯ ಟೀಕೆ ಮಾಡೋದು ಸರಿಯಲ್ವಂತೆ. ವಿರೋಧ ಪಕ್ಷದ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ಇವತ್ತು ಸಂಘದ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆಯಂತೆ. ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಸಂಘಪರಿವಾರದ ಹೆಸರು ತೆಗೆದುಕೊಳ್ಳದೆ ಇದ್ರೆ ತಿಂದಿದ್ದು ಅರಗುವುದಿಲ್ಲ. ರಾಜ್ಯದಲ್ಲಿ ಹಾಗೂ ಎಲ್ಲ ಸಮಸ್ಯೆಗಳಿೂ ಸಂಘಪರಿವಾರವನ್ನೇ ಗುರಿಮಾಡುತ್ತಾರೆ. ಪದೇಪದೆ ಆರ್.ಎಸ್.ಎಸ್. ಹೆಸರು ಹೇಳೋದು, ಸಂಘಪರಿವಾರದ ಹೆಸರು ಹೇಳೋದು ಖಯಾಲಿಯಾಗಿಬಿಟ್ಟಿದೆಯಂತೆ. ಹೀಗಂತ ಹೇಳಿದ್ದು ರಾಜ್ಯದ ಮಾಜಿ ಸಿಎಂ ಜಗದೀಶ್ ಶೆಟ್ಟರ್.
ಧಾರವಾಡದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ಶೆಟ್ಟರ್ ಪ್ರತಿಕ್ರಿಯೆ ಇದು.
ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ನಾಶಪಡಿಸಿದ್ದು ಹಿಂದೂಪರ ಸಂಘಟನೆಯಲ್ಲವೇ? ಹೀಗಿದ್ದಾಗ್ಯೂ ಒಂದು ಜವಾಬ್ದಾರಿ ಸ್ಥಾನದಲ್ಲಿರುವವರು ನೀಡುವ ಹೇಳಿಕೆಯೇ ಇದು? ಎನ್ನುವುದು ಕೆಲವರ ಪ್ರಶ್ನೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡೋಕೆ ಆಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ತಪ್ಪು ಯಾರದ್ದೆ ಇದ್ದರೂ ಕ್ರಮ ತೆಗೆದುಕೊಳ್ಳಲಿ. ಬಡ ವ್ಯಾಪಾರಿಯ ಹಣ್ಣುಗಳನ್ನು ಹಸಿದ ಹೊಟ್ಟೆಗಾದ್ರು ನೀಡಿದ್ರೆ ಬೇಸರವಿರಲಿಲ್ಲ. ಅನಾವಶ್ಯಕವಾಗಿ ರಸ್ತೆಗೆ ಚೆಲ್ಲ ಹಾನಿಗೊಳಿಸಿದ್ದು ಕಂಡು ಬಂದಾಗ್ಯೂ ಇವರಿಗೆ ಈ ವರ್ತನೆಗೆ ಅನುಮತಿ ನೀಡಿದವರು ಯಾರು? ಇಷ್ಟೆಲ್ಲ ದೌರ್ಜನ್ಯ ನಡೆದಾಗ್ಯೂ ಕಾನೂನು ಸುವ್ಯವಸ್ಥೆ ಬಗ್ಗೆ ಇವರೇ ಮಾತಾಡುತ್ತಾರೆ. ಅಂದರೆ ರಾಜ್ಯದಲ್ಲಿ ಗೂಂಡಾ ಪ್ರವೃತ್ತಿ ಪೋಷಿಸಿ ಸೌಹಾರ್ಧತೆಗೆ ಗೋರಿ ಕಟ್ಟಿದರೆ ಕಾನೂನು ಸುವ್ಯವಸ್ಥೆ ಕಾಪಾಡಿದಂತೆನಾ? ಎನ್ನುವುದು ಹಲವರ ಪ್ರಶ್ನೆ. ಶೆಟ್ಟರ್ ಅವರಂಥವರ ಇಂಥ ಹೇಳಿಕೆಗಳೇ ಅಲ್ಲವೇ ಉರಿಯುವ ಬೆಂಕಿಯಲ್ಲಿ ಇನ್ನಷ್ಟು ತುಪ್ಪ ಸುರಿಯುವಂತೆ ಮಾಡುವುದು