ಕೋಲಾರದ ಬಂಗಾರಪೇಟೆ ಪುರಸಭೆಯ ನೂತನ ಕಟ್ಟಡ ಉದ್ಗಾಟನೆ ವೇಳೆ ರಿ ಹೈಡ್ರಾಮ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆಗಳನ್ನ ಮೊಳಗಿಸಿದರೆ ವೇದಿಕೆಯಲ್ಲಿದ್ದ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವ ಮೂಲಕ ಸಮಾರಂಭ ಗೊಂದಲದ ಗೂಡಾಗಿ ಪರಿಣಮಿಸಿತು.
ವೇದಿಕೆ ಮುಂಭಾಗದಲ್ಲಿ ಕುಳಿತುಕೊಳ್ಳುವ ಚೇರ್ ಗಳಿಗಾಗಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು, ಮೋದಿ ಮೋದಿ ಎಂದು ಬಿಜೆಪಿ ಕಾರ್ಯಕರ್ತರು ಕೂಗಿದರೆ SN -SN ಎಂದು ಶಾಸಕ ಬೆಂಬಲಿಗರು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಬಿಜೆಪಿ ಕಾರ್ಯಕರ್ತರು ರೌಡಿಗಳಂತೆ ವರ್ತಿಸಬೇಡಿ ಎಂದರು. ವೇದಿಕೆಯಲ್ಲೆ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸಚಿವ ಮುನಿರತ್ನ ಅವರೆಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು. ಅವರನ್ನ ರೌಡಿಗಳು ಅಂತ ಕರೆಯಬೇಡಿ ಎಂದು ಎಚ್ವರಿಸಿದರು. ಇದಾದ ನಂತರ ಸಂಸದ ಮುನಿಸ್ವಾಮಿ ಭಾಷಣಕ್ಕೆ ನಿಲ್ಲುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗರಂ ಆದರು. ಭಾಷಣದ ವೇಳೆ ಬಂಗಾರಪೇಟೆ ನಗರ ಅಭಿವೃದ್ದಿಯೇ ಆಗಿಲ್ಲ ಎಂದು ಸಂಸದ ಮುನಿಸ್ವಾಮಿ ಆಪಾದಿಸಿರೆ, ಪೋಡಿಯಂ ಕಡೆಗೆ ತೆರಳಿದ ಕಾಂಗ್ರೆಸ್ ಎಮ್.ಎಲ್.ಸಿ ಅನಿಲ್ ಕುಮಾರ್ ಸಂಸದರ ವಿರುದ್ಧ ವಾಗ್ಧಾಳಿ ನಡೆಸಿದರು. ಈ ವೇಳೆ ಕಾರ್ಯಕರ್ತರು ಜಟಾಪಟಿಗೆ ಇಳಿದ ಪರಿಣಾಮ ನೂಕಾಟ ತಳ್ಳಾಟ, ಬಿಗುವಿನ ಪರಿಸ್ತಿತಿ ನಿರ್ಮಾಣವಾಗಿ, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು.ಇದರಿಂದ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿತು.