ಬೆಂಗಳೂರು,ಡಿ.4 – ಪೊಲೀಸರು ಇತ್ತೀಚೆಗೆ ಕಳ್ಳತನ ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ವರದಿಗಳು ಹೆಚ್ಚಾಗುತ್ತಿವೆ. ಯಾವುದಾದರೂ ಪೊಲೀಸ್ ಸಿಬ್ಬಂದಿ ಅಪರಾಧ ಚಟುವಟಿಕೆಗಳಲ್ಲಿ ಶಾಮಿಲಾದರೆ ಅಂತವರನ್ನು ಮುಲಾಜಿಲ್ಲದೆ ಸೇವೆಯಿಂದ ವಜಾ ಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದರೂ ಕೂಡ ಈ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.
ಇದರ ಸಾಲಿಗೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ ಅದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿ ನಡೆದಿರುವ ಘಟನೆಯಾಗಿದೆ.
ಸೈಬರ್ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಒಬ್ಬನನ್ನು ಬಂಧಿಸಿ ಕರೆ ತಂದಿದ್ದ ಪೊಲೀಸರು ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿರುವ ಸೈಬರ್ ವಿಭಾಗದಲ್ಲಿ ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಿದ್ದರು.
ಸೈಬರ್ ಅಪರಾಧದ ಆರೋಪಿ ತನ್ನ ಕಾರಿನಲ್ಲಿ ಬೆಂಗಳೂರು ನಗರ ಪೊಲೀಸ್ ಕಚೇರಿಗೆ ಆಗಮಿಸಿದ್ದರು.ಕಚೇರಿಯ ಆವರಣದಲ್ಲಿಯೇ ತಮ್ಮ ಕಾರು ನಿಲುಗಡೆ ಮಾಡಿದ್ದರು.
ವಿಚಾರಣೆಯ ನಂತರ ಈ ವ್ಯಕ್ತಿಯನ್ನು ಪೊಲೀಸರು ಜೈಲಿಗೆ ತಳ್ಳಿದರು ಆನಂತರ ಆತ ಜಾಮೀನು ಪಡೆದು ಹೊರಗೆ ಬಂದಿದ್ದ ಬಳಿಕ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ತನ್ನ ಕಾರನ್ನು ತೆಗೆದುಕೊಳ್ಳಲು ಬಂದಿದ್ದ ಈ ವೇಳೆ ಕಾರಿನಲ್ಲಿ ತಾನು 11 ಲಕ್ಷ ರೂಪಾಯಿ ಇರುವ ಹಣದ ಚೀಲ ಇಟ್ಟಿದ್ದೆ ಅದು ನಾಪತ್ತೆಯಾಗಿದೆ ಎಂದು ಹೇಳಿ ದೂರು ಸಲ್ಲಿಸಿದ್ಧ
ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ಹಣ ಕಳ್ಳತನವಾಗಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಿದ್ದರು.
ಈ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಹಾಕಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿತು.ಈ ವೇಳೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಜಬೀವುಲ್ಲಾ ಹಣದ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಈ ಮೂಲಕ ಪೊಲೀಸಪ್ಪನೇ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಇನ್ನು ಕಳ್ಳತನ ಮಾಡಿದ ಹೆಡ್ ಕಾನ್‌ಸ್ಟೇಬಲ್ ಜಬಿವುಲ್ಲಾ ತಮಗೇನು ಗೊತ್ತೇ ಇಲ್ಲ ಎಂಬಂತೆ ನಟಿಸುತ್ತಾ ಆರಾಮಾಗಿ ಓಡಾಡಿಕೊಂಡಿದ್ದ.
ಘಟನೆಯ ಬಗ್ಗೆ ತನಿಖೆಗೆ ರಚಿಸಲಾಗಿದ ವಿಶೇಷ ತಂಡ ಹೆಡ್ ಕಾನ್ಸ್‌ಟೇಬಲ್ ಜಬೀವುಲ್ಲಾ ಮನೆ ಸರ್ಚ್ ಮಾಡಲು ತೆರಳಿದಾಗ ಮನೆಯ ಬಳಿ ಜಬೀವುಲ್ಲಾ ಹೈಡ್ರಾಮಾ ಮಾಡಿದ್ದಾನೆ. ಮನೆಯ ಒಳಗೆ ಸೈಬರ್ ಪೊಲೀಸರನ್ನ ಬಿಡದೆ ಗಲಾಟೆ ಮಾಡಿದ್ದಾನೆ. ಕೊನೆಗೆ ಜಬೀವುಲ್ಲಾನನ್ನ ತಡೆದು ಮನೆ ಸರ್ಚ್ ಮಾಡಿದಾಗ ತನ್ನ ಕೋಣೆಯ ಬೆಡ್ ಕೆಳಗೆ ಲಕ್ಷ ಲಕ್ಷ ಹಣ ಜೋಡಿಸಿಟ್ಟಿದ್ದು ಬಯಲಾಗಿದೆ. ಅಲ್ಲದೇ ಕದ್ದ ಹಣದಿಂದಲೇ ಪತ್ನಿಗೆ ಒಡೆವೆಗಳನ್ನೂ ಕೊಡಿಸಿದ್ದ ಅಂಶ ಕೂಡ ಬೆಳಕಿಗೆ ಬಂದಿದ್ದು ಈ ಬಗ್ಗೆ ತನಿಕಾ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.
Previous Articleಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
Next Article ಸಫಾರಿ ಸ್ಥಗಿತ – ಮುಂದೇನು?

