ಭೂ ಪರಿವರ್ತನೆ ಸ್ಕೆಚ್, ಪೋಡಿ, ಹದ್ದುಬಸ್ತ್ ಮತ್ತು ಇತರ ನಕ್ಷೆಗಳನ್ನು ಪಡೆದುಕೊಳ್ಳುವುದು ಜನ ಸಾಮಾನ್ಯರಿಗೆ ಸವಾಲಿನ ಸಂಗತಿ. ಇವುಗಳಿಗಾಗಿ ಬರುವ ಜನರನ್ನು ಹಲವು ಬಾರಿ ಕಚೇರಿಯ ಮೆಟ್ಟಿಲು ಹತ್ತುವಂತೆ ಮಾಡುವುದಕ್ಕೆ ಕಂದಾಯ ಇಲಾಖೆ ಪ್ರಸಿದ್ಧಿ ಪಡೆದಿದೆ.ಇದರ ಜೊತೆಯಲ್ಲಿ ಲಂಚದ ಹಾವಳಿಯಂತೂ ಇದ್ದಿದ್ದೆ.
ಈ ಎಲ್ಲಾ ಆರೋಪಗಳಿಗೆ ತಿಲಾಂಜಲಿ ಹಾಕಲು ಕಂದಾಯ ಇಲಾಖೆ ಮುಂದಾಗಿದೆ.
ಸರ್ವೇ ಸೆಟ್ಲಮೆಂಟ್ ಮತ್ತು ಭೂ ಪರಿವರ್ತನೆ ಆಯುಕ್ತ ಮೌನೀಶ್ ಮೌದ್ಗಿಲ್ ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಿ ಹೊಸ ವ್ಯವಸ್ಥೆ ರೂಪಿಸಿದ್ದಾರೆ. ಇದರಿಂದಾಗಿ ಇನ್ನು ಮುಂದೆ ನಾಗರೀಕರು.
11E, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರೆ ನಕ್ಷೆಗಳ ಪ್ರಿಂಟ್ ಔಟ್ ಪಡೆಯಲು ಸರ್ವೇ ಕಚೇರಿಗಳಿಗೆ ಅಲೆಯಬೇಕಿಲ್ಲ. ಇನ್ಮುಂದೆ ಈ ಎಲ್ಲ ಸೇವೆಗಳು ಅನ್ ಲೈನ್‌ನಲ್ಲೇ ಲಭ್ಯವಾಗಲಿದೆ.
ಅಂದರೆ, ಇನ್ನು ಮುಂದೆ ಆನ್‌ಲೈನ್‌ನಲ್ಲೇ ನಕ್ಷೆಗಳ ಪ್ರಿಂಟ್ ಪಡೆಯಬಹುದು ಮತ್ತು ಅರ್ಜಿಗಳ ಸ್ಥಿತಿ ಗತಿ ಚೆಕ್ ಮಾಡಬಹುದು.
ನಾಗರಿಕರು ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿಗಳಿಗೆ ಹಣ ಪಾವತಿಸುತ್ತಾರೆ. ಹಾಗಾಗಿ ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, ಅಧಿಕೃತ ವೆಬ್‌ಸೈಟ್‌ನಲ್ಲಿಅದನ್ನು ಪ್ರಿಂಟ್ ಪಡೆಯಲು ಲಭ್ಯವಿರುತ್ತದೆ. ಅದೇ ವೆಬ್‌ಸೈಟ್ ಲಿಂಕ್‌ನಲ್ಲಿ ಯಾವುದೇ ಸಮಯದಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು (ಸ್ಟೇಟಸ್ ಚೆಕ್) ಕೂಡ ತಿಳಿದುಕೊಳ್ಳಬಹುದು
ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ ಎಂದು ಮೌನೀಶ್ ಮುದ್ಗೀಲ್ ತಿಳಿಸಿದ್ದಾರೆ.
ನಾಗರಿಕರು ಅರ್ಜಿ ಸಲ್ಲಿಕೆ ಸಮಯದಲ್ಲೇ ಶುಲ್ಕ ಪಾವತಿ ಮಾಡಿರುವುದರಿಂದ, ಸ್ಕೆಚ್‌ಗಳು, ಪೋಡಿ ಮೊದಲಾದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪ್ರಿಂಟ್ ಪಡೆಯಲು ಯಾವುದೇ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ ಈ ಮೂಲಕ ಭೂ ಮಾಲೀಕರಿಗೆ ತಮ್ಮ ಅಗತ್ಯ ದಾಖಲೆಗಳನ್ನು ಪಡೆಯುವ ವಿಧಾನವನ್ನು ಸರಳೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
Previous Articleಶರದ್ ಪವಾರ್ ಮಾಡುತ್ತಿದ್ದಾರೆ ಕರ್ನಾಟಕದಲ್ಲಿ ಕಮಾಲ್…
Next Article ರಘುನಂದನ್ ರಾಮಣ್ಣ ಅವರಿಗೆ ರಾಹುಲ್ ಗಾಂಧಿ ಅಭಿನಂದನೆ