Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಸವಣ್ಣ ಲಿಂಗಾಯಿತ ಧರ್ಮ ಸ್ಥಾಪಕ!!
    ವಿಶೇಷ ಸುದ್ದಿ

    ಬಸವಣ್ಣ ಲಿಂಗಾಯಿತ ಧರ್ಮ ಸ್ಥಾಪಕ!!

    vartha chakraBy vartha chakraMay 4, 2022Updated:May 4, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕಾಯಕವೇ ಕೈಲಾಸ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ತತ್ವವನ್ನು ಬೋಧಿಸಿದ ಮಹಾನ್ ಮಾನವತಾವಾದಿ ಬಸವಣ್ಣ ಜಗತ್ತು ಕಂಡ ಅತ್ಯಂತ ಶ್ರೇಷ್ಟ ದಾರ್ಶನಿಕ.
    ಇವನಾರವ‌…ಇವನಾರವ.ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ.. ನಮ್ಮವ ..ಎಂದೆನಿಸಯ್ಯಾ.. ಎಂದು ಹೇಳಿ ಎಲ್ಲರೂ ನಮ್ಮವರೆ ಎಂದು ಪ್ರತಿಪಾದಿಸುವ ಮೂಲಕ ಜಗತ್ತಿಗೆ ಸಮಾನತೆಯ ಮಂತ್ರ ಬೋಧಿಸಿದ ಬಸವಣ್ಣ ಹಿಂದೂ ಧರ್ಮದಲ್ಲಿನ‌ ಕಂದಾಚಾರಗಳನ್ನು ಧಿಕ್ಕರಿಸಿ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಎಂಬ ಆಶಯದ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು. ಹಿಂದೂ ಧರ್ಮದಲ್ಲಿ ಹಾಸು ಹೊಕ್ಕಾಗಿದ್ದ ಮೇಲು-ಕೀಳು ಎಂಬ ಜಾತಿ ತಾರತಮ್ಯವನ್ನು ಧಿಕ್ಕರಿಸಿದ ಹನ್ನೆರಡನೆ ಶತಮಾನದ ಈ ಧರ್ಮ ಕೆಲವೇ ದಿನಗಳಲ್ಲಿ ಜನಮೆಚ್ಚುಗೆ ಪಡೆದಿದ್ದು ಇದೀಗ ಇತಿಹಾಸ.
    ಲಿಂಗ ಧರಿಸಿದವರೆಲ್ಲಾ ಲಿಂಗಾಯಿತರೆಂದ ಬಸವಣ್ಣನ ಧರ್ಮ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸಿದಾಗ ಅದಕ್ಕೆ ಬಲವಾದ ವಿರೋಧ ವ್ಯಕ್ತ ಪಡಿಸಿದ್ದು ಸಂಘ ಪರಿವಾರ.
    ಕಳೆದ 2001 ಮತ್ತು 2011ರಲ್ಲಿ ನಡೆದ‌ ಜನಗಣತಿಯ ವೇಳೆ ಲಿಂಗಾಯಿತರೆಲ್ಲಾ ತಮ್ಮದು ಲಿಂಗಾಯಿತ ಧರ್ಮ ಎಂದು ನಮೂದಿಸುವಂತೆ ದಿವಂಗತ ಮಾತೆ ಮಹಾದೇವಿ, ಎಂ.ಎಂ.ಕಲಬುರಗಿ ಸೇರಿದಂತೆ ಅನೇಕ ಮಠಾಧೀಶರು, ದಾರ್ಶನಿಕರು‌ ಕರೆ ನೀಡಿದ್ದರು.ಕಾಂಗ್ರೆಸ್ ನ ಹಲವು ನಾಯಕರು ಈ ವಾದವನ್ನು ಬೆಂಬಲಿಸಿದ್ದರು.ಆದರೆ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಲಿಂಗಾಯಿತ ಧರ್ಮವಲ್ಲ ಅದೊಂದು ಹಿಂದೂ ಧರ್ಮದಲ್ಲಿನ ಜಾತಿ.ಎಲ್ಲಾ ಲಿಂಗಾಯಿತರು ಹಿಂದೂಗಳು ಎಂದು ಪ್ರತಿಪಾದಿಸಿದ್ದರು.
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ‌ ಅವಧಿಯಲ್ಲಂತೂ ಇದು‌ ತೀವ್ರ ಸ್ವರೂಪ ಪಡೆದುಕೊಂಡಿತು. ರಾಜ್ಯ ಸರ್ಕಾರ ಲಿಂಗಾಯಿತ ಎನ್ನುವವುದು ಭಕ್ತಿ ಭಂಡಾರಿ ಬಸವಣ್ಣ ಸ್ಥಾಪಿತ ಪ್ರತ್ಯೇಕ ಧರ್ಮ ಎಂದು‌ ಪ್ರತಿಪಾದಿಸಿದರೆ,ರಾಜ್ಯ ಬಿಜೆಪಿ‌ ಮತ್ತು ಕೇಂದ್ರ‌ ಸರ್ಕಾರ ಇದನ್ನು ವಿರೋಧಿಸಿದ್ದು ಇದೀಗ ಇತಿಹಾಸ.
    ಈಗ ಬಸವ ಜಯಂತಿಯಂದು ಬಸವಣ್ಣನ ಗುಣಗಾನ‌ ನಡೆದಿದೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಸವಣ್ಣನ ವಚನಗಳು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳದಿದೆ.
    ಈ ಟ್ವೀಟ್ ನಲ್ಲಿ ಗಡ್ಕರಿ ಅವರು ಬಸವಣ್ಣ ಅವರನ್ನು ಲಿಂಗಾಯಿತ ಧರ್ಮದ‌ ಸ್ಥಾಪಕ ಎಂದು ಬಣ್ಣಿಸಿದ್ದಾರೆ.
    ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವರು ಕೊನೆಗೂ ಸತ್ಯ ಹೊರ ಬಂದಿದೆ ಎಂದು ಹೇಳಿ ಗಡ್ಕರಿ‌ ಅವರ ನಡೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
    ಗಡ್ಕರಿ ಅವರು ಪ್ರತಿನಿಧಿಸುವ ನಾಗಪುರ ಲೋಕಸಭಾ ಕ್ಷೇತ್ರ ಹಾಗೂ ಅದರ ಆಸುಪಾಸಿನಲ್ಲಿ ಲಿಂಗಾಯಿತರು ದೊಡ್ಡ ಪ್ರಮಾಣದಲ್ಲಿದ್ದಾರೆ ಹೀಗಾಗಿ ಇವರ ಈ ಹೇಳಿಕೆ ಗಮನ ಸೆಳೆದಿದೆ.
    ಸಂಘ ಪರಿವಾರದ ಕಟ್ಟಾ ಕಾರ್ಯಕರ್ತ ನಿತಿನ್ ಗಡ್ಕರಿ‌ ಒಂದು ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಲಿಂಗಾಯಿತ ಧರ್ಮ ಎಂಬ ಇವರ ಟ್ವೀಟ್ ಇದೀಗ ಚರ್ಚೆಯ ವಿಷಯವಾಗಿದೆ.

    Verbattle
    Verbattle
    Verbattle
    basavanna lingayat nithin gadkari tweet ನಿತಿನ್ ಗಡ್ಕರಿ ಟ್ವೀಟ್
    Share. Facebook Twitter Pinterest LinkedIn Tumblr Email WhatsApp
    Previous Articleಪಂಜಾಬ್ ಗೆ ಸುಲಭ ಜಯ
    Next Article 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ!
    vartha chakra
    • Website

    Related Posts

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    February 20, 2026

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    February 15, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    February 14, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಮಸೀದಿಯಾದ ದೇವಸ್ಥಾನ

    ಕೇರಳದಿಂದ ‘ಕೇರಳಂ’ವರೆಗೆ: ರಾಜ್ಯದ ಹೆಸರು ಬದಲಾವಣೆಯ ಸಾಂವಿಧಾನಿಕ ಹಾದಿ

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ಸುಶಿಕ್ಷಿತರು: ಪ್ಯೂ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Ipzcod on ಪಂಚಮಸಾಲಿ ಮೀಸಲಾತಿಗೆ ವಿರೋಧ.
    • Tayloradvag on ಪರಪ್ಪನ ಅಗ್ರಹಾರದಲ್ಲಿ ಉಗ್ರ ಚಟುವಟಿಕೆ
    • Agckwq on ಕಾಳಿ ನದಿ ಪಾತ್ರದ ಜನರಿಗೆ ಎಚ್ಚರಿಕೆ.
    Latest Kannada News

    ಮಸೀದಿಯಾದ ದೇವಸ್ಥಾನ

    February 25, 2026

    ಕೇರಳದಿಂದ ‘ಕೇರಳಂ’ವರೆಗೆ: ರಾಜ್ಯದ ಹೆಸರು ಬದಲಾವಣೆಯ ಸಾಂವಿಧಾನಿಕ ಹಾದಿ

    February 25, 2026

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    February 24, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.