ತಾಯಿಯಿಂದ ಬೇರ್ಪಟ್ಟಿರುವ ಮೂರು ಹುಲಿ ಮರಿಗಳನ್ನು ಲ್ಯಾಬ್ರಡಾರ್ ನಾಯಿಯೊಂದು ಪ್ರೀತಿಯಿಂದ ಸಲಹುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಹುಲಿ ಮರಿಗಳು ಮತ್ತು ಸಾಕು ತಾಯಿಯ ನಡುವಿನ ಬಾಂಧವ್ಯ ನೋಡುಗರನ್ನು ಬೆರಗುಗೊಳಿಸಿದೆ. ಹುಲಿ ಮರಿಗಳು ನಾಯಿಯ ಸುತ್ತ ಆಟವಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಹುಟ್ಟಿದ ಕೂಡಲೇ ಈ ಮರಿಗಳಿಗೆ ಆಹಾರ ನೀಡಲು ನಿರಾಕರಿಸಿದ ತಾಯಿ ಹುಲಿ ಅವುಗಳನ್ನು ಬಿಟ್ಟು ಹೋಗಿದೆ.
‘ಎ ಪೀಸ್ ಆಫ್ ನೇಚರ್’ ಟ್ವಿಟರ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈವರೆಗೆ 1.12 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 6 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ.
ಹೆಣ್ಣು ಹುಲಿ ತನ್ನ ಮರಿಗಳಿಂದ ದೂರ ಉಳಿದಿರುವುದು ಹೊಸ ಸಂಗತಿಯೇನಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಎಸಿ) ತಿಳಿಸಿದೆ.
ಕೆಲವು ಹೆಣ್ಣು ಹುಲಿಗಳು ಗಾಯಗೊಂಡಿದ್ದು, ಆಹಾರ ನೀಡಲು ಅಸಮರ್ಥತೆಯಿಂದ ಕೂಡಿದ್ದರೆ ತಮ್ಮ ಮರಿಗಳನ್ನು ಬಿಟ್ಟು ಹೋಗುತ್ತವೆ ಎಂದು ಎನ್‌ಟಿಎಸಿ ಅಭಿಪ್ರಾಯಪಟ್ಟಿದೆ.
Previous Articleಪಿ.ಚಿದಂಬರಂ ಮನೆ, ಕಚೇರಿ ಮೇಲೆ ಸಿಬಿಐ ದಾಳಿ
Next Article Love ಗಾಗಿ ತಾಯಿ ಒಡವೆ ಕಳವು..