ಗ್ಯಾರಂಟಿ ಅನುಷ್ಠಾನ ಸಮಿತಿಗಳ ನೇಮಕಾತಿಗಳ ಬಗ್ಗೆ ಭಯಂಕರ ಅಸಮಾಧಾನಗೊಂಡಿರುವ @BJP4Karnataka ನಾಯಕರಿಗೆ ಮಹಾರಾಷ್ಟದ ಬಿಜೆಪಿ ಸರ್ಕಾರದ ತೀರ್ಮಾನದ ಬಗ್ಗೆ ಅರಿವಿದೆಯೇ?
ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಆರ್ಎಸ್ಎಸ್ ಕಾರ್ಯಕರ್ತರನ್ನು ಮಹಾರಾಷ್ಟ್ರ ಸರ್ಕಾರದ ಪ್ರತಿ ಸಚಿವರಿಗೆ ಪಿಎ ಹಾಗೂ ಇತರ ಅಧಿಕಾರಿಗಳಾಗಿ ನೇಮಿಸಿದ್ದರ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರು ಮಹಾಮೌನ ವ್ರತ ಆಚರಿಸುತ್ತಿರುವುದೇಕೆ?
ಮಹಾರಾಷ್ಟ್ರ ಸರ್ಕಾರದ ಈ ನಡೆ ಬಗ್ಗೆ ಇಲ್ಲಿನ ಬಿಜೆಪಿ ನಾಯಕರಿಗೆ ಸಹಮತ ಇದೆಯೇ?
ಮಂತ್ರಿಗಳ ಕಚೇರಿಯಲ್ಲಿ ಸರ್ಕಾರೇತರ ನೌಕರರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಮಹಾರಾಷ್ಟ್ರ ಸರ್ಕಾರವು ತಿದ್ದುಪಡಿ ಮಾಡಿ, ಅಂತಹ ನೇಮಕಾತಿಗಳ ಸಂಖ್ಯೆಯನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಿದೆ.
ಈ ನೇಮಕಾತಿಗಳಲ್ಲಿ ಆರ್ಎಸ್ಎಸ್ ಕಾರ್ಯಕರ್ತರನ್ನೇ ತುಂಬಲಾಗಿದೆ.
ಇದು ‘ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯ‘ಕ್ಕಾಗಿ ಅಲ್ಲವೇ @BJP4Karnataka?