ಬೆಂಗಳೂರು,ನ.24-
ಪ್ರೀತಿಯಿಂದ ತನ್ನನ್ನು ಭೇಟಿ ಮಾಡಲು ಬಂದ ಪ್ರಿಯಕರನನ್ನು ಆಪ್ತರ ಮೂಲಕ ಅಪಹರಣ ಮಾಡಿಸಿ ಸುಲಿಗೆ ಮಾಡಿದ್ದ ಪ್ರಿಯತಮೆ ಸಿನಿಮೀಯ ರೀತಿಯಲ್ಲಿ ಕೋರಮಂಗಲ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಪ್ರಿಯತಮೆಯೇ ಸುಲಿಗೆ ಹಿಂದಿನ ಕಿಂಗ್‌ಪಿನ್ ಎಂಬ ವಿಷಯ ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಶಿವ ಮತ್ತು ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಿರುವಾಗ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕಂತೆ, ನಿನ್ನ ಬಳಿಯಿರುವ ಚಿನ್ನಾಭರಣ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಾ ಎಂದು ಪ್ರಿಯತಮೆ ಫೋನ್ ಮಾಡಿದ್ದಾಳೆ.
ಮೋನಿಕಾ ಮಾತು ನಂಬಿದ ಪ್ರಿಯಕರ 60 ಗ್ರಾಂ ಚಿನ್ನಾಭರಣದ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾಗ ಮೋನಿಕಾ ಅಂಡ್ ಗ್ಯಾಂಗ್ ಶಿವನನ್ನ ಅಪಹರಣ ಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ಪ್ರಿಯತಮೆ ಶಿವನಿಗೆ 5 ಲಕ್ಷ ರೂ. ಕೊಡಲು ಒಪ್ಪಿಸಿದ್ದಳು. ಎಟಿಎಂ ಕಾರ್ಡ್ ಮೆಜೆಸ್ಟಿಕ್ ಅಡ್ರೆಸ್‌ಗೆ ಕೋರಿಯರ್ ಮಾಡಿಸಿಕೊಡು ಕೋರಮಂಗಲಕ್ಕೆ ಹಣ ಡ್ರಾ ಮಾಡಿಕೊಳ್ಳಲು ಬಂದಿದ್ದರು.
ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಆರೋಪಿಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೌಂಡ್ಸ್‌ನಲ್ಲಿದ್ದ ಪಿಎಸ್‌ಐ ಮಾದೇಶ್ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಮತ್ತು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್‌ನನ್ನು ಬಂಧಿಸಿದ್ದಾರೆ. ಬಂಧಿತ ಏಳು ಮಂದಿಯೂ ಆಂಧ್ರದ ನೆಲ್ಲೂರು ಮೂಲದವರು ಎಂದು ತಿಳಿಸಿದ್ದಾರೆ.
ಇನ್ನೂ ಪ್ರಕರಣದ ಕುರಿತು ಮಾತನಾಡಿದ ಡಿಸಿಪಿ ಸಾರಾ ಫಾತಿಮಾ, ಪ್ರಕರಣದಲ್ಲಿ ಯುವತಿ ಸೇರಿ 7 ಆರೋಪಿಗಳ ಬಂಧನವಾಗಿದೆ. 7 ಜನ ಆರೋಪಿಗಳಲ್ಲಿ ಇಬ್ಬರ ಮೇಲೆ 5ಕ್ಕೂ ಹೆಚ್ಚು ಪ್ರಕರಣಗಳಿವೆ. ದೂರುದಾರ, ಆರೋಪಿ ಯುವತಿಗೆ ಮೂರ್ನಾಲ್ಕು ವರ್ಷದಿಂದ ಪರಿಚಯದಲ್ಲಿದ್ದ, ನೆಲ್ಲೂರಿನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಕೋರಮಂಗಲ ಎಸ್‌ಐ ರಾತ್ರಿ ಗಸ್ತಿನ ಲ್ಲಿದ್ದಾ ಗ ಎಟಿಎಂ ಬಳಿ ಆರೋಪಿಗಳ ನಡುವೆ ಗಲಾಟೆ ನಡೆದಿದೆ.
3 ಜನರ ಜಗಳ ಕಂಡು ಬಂದಾಗ ಗಮನಿಸಿ ಅನುಮಾನ ಬಂದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿಚಾರಣೆ ಮಾಡಿದಾಗ ಅಪಹರಣವಾಗಿರುವುದು ಆಗಿರುವುದು ಬೆಳಕಿಗೆ ಬಂದಿದೆ. ಹಣ ಡ್ರಾ ಮಾಡುತ್ತಿರುವುದು ಸುಲಿಗೆ ಹಣ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮೋನಿಕಾ ತನ್ನ ಗೆಳೆಯ ಶಿವನನ್ನು ಆಂಧ್ರದಿಂದ ಹಿಂದೂಪುರದ ಬಳಿಯ ಪೆನುಕೊಂಡ ಪಾವಗಡ ಬಳಿ ಕರೆಸಿದ್ದಾಳೆ. ಬಳಿಕ 4 ಆರೋಪಿಗಳು ಅಪಹರಿಸಿ ಪಾವಗಡದ ಒಂದು ಖಾಸಗಿ ಹೋಟೇಲ್‌ನಲ್ಲಿ 3 ದಿನ ಕೂಡಿ ಹಾಕಿದ್ದಾರೆ. ಅವನ ಬಳಿ ಇರುವ ಚಿನ್ನಾಭರಣ ಪಡೆದು ಅಡವಿಟ್ಟಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರ ತನ್ನ ಸ್ನೇಹಿತರಿಂದ ಬ್ಯಾಂಕ್‌ಗೆ 5 ಲಕ್ಷ ಹಾಕಿಸಿಕೊಂಡಿದ್ದಾನೆ. ನಂತರ ಡೆಬಿಟ್ ಕಾರ್ಡ್ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಅದನ್ನ Bengaluru ಅಡ್ರೆಸ್‌ಗೆ ಕೋರಿಯರ್ ಮಾಡಿ ಎಂದು ಹೇಳಿದ್ದಾನೆ. ಹಣವನ್ನ ವಿತ್‌ಡ್ರಾ ಮಾಡುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. 5 ಲಕ್ಷ ರೂ. ನೀಡಿರುವುದಾಗಿ ದೂರುದಾರ ಹೇಳಿದ್ದಾನೆ, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿದಿದ್ದಾರೆ.
Previous Articleಹೇರ್ ಡ್ರೈಯರ್ ಸ್ಪೋಟದ ಹಿಂದಿನ ಅಸಲಿ ಕಹಾನಿ.
Next Article ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಿಂದ ಬಂತು ಹಣ..?