ಬೆಂಗಳೂರು,
ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ವಾರಾಂತ್ಯದ ದಿನಗಳಲ್ಲಿ ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ರಸ್ತೆಗಳಲ್ಲಿ ಅಪಘಾತ ಮತ್ತು ಗದ್ದಲಕ್ಕೆ ಕಾರಣವಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಗುರುವಾರದ ರಾತ್ರಿ 9:00 ಗಂಟೆಯಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೆ ವಿಶೇಷ ತಪಾಸಣೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಯಾವುದೇ ವ್ಯಕ್ತಿ ಮಧ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರೆ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಜೊತೆಗೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದಾರೆ.
ಈ ಬಗ್ಗೆ ಈಗಾಗಲೇ ಸಾರ್ವಜನಿಕ ಪ್ರಕಟಣೆ ನೀಡಿದ್ದು ಯಾವುದೇ ಕಾರಣಕ್ಕೂ ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಹಾಗೂ ರಸ್ತೆಗಳಲ್ಲಿ ಅನಗತ್ಯ ಜಗಳ ಹೋಡೆದಾಟ ವಾಗ್ವಾದಗಳಲ್ಲಿ ತೊಡಗಬೇಡಿ ಎಂಬ ಎಚ್ಚರಿಕೆ ನೀಡಿದ್ದಾರೆ.
ಈ ಸೂಚನೆ ಹೊರಬಿದ್ದ ಗುರುವಾರ ರಾತ್ರಿಯಿಂದ ಮುಂಜಾನೆಯವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು 8,550 ವಾಹನಗಳ ತಪಾಸಣೆ ನಡೆಸಿ 167 ಪಾನಮತ್ತ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಗರದ ಪ್ರಮುಖ ರಸ್ತೆ ಜಂಕ್ಷನ್‌ಗಳಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗುವ ಜಂಕ್ಷನ್‌ಗಳಲ್ಲಿ ಪಿಎಸ್ಐಗಳ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.
ರಾತ್ರಿ 11.30ರಿಂದ ನಡೆದ ವಾಹನಗಳ ಮುಂಜಾನೆವರೆಗೆ ನಡೆದ ತಪಾಸಣೆಯಲ್ಲಿ ಪ್ರತೀ ಜಂಕ್ಷನ್‌ನಲ್ಲಿಯೂ ಓರ್ವ ಪಿಎಸ್ಐ ಹಾಗೂ ಮಹಿಳಾ ಸಿಬ್ಬಂದಿ ಭಾಗಿಯಾಗಿದ್ದರು. ಸಿಸಿಟಿವಿ ಇರುವ ಜಂಕ್ಷನ್‌ಗಳಲ್ಲಿ ರಾತ್ರಿ ಡಿಡಿ ಚೆಕ್ ಮಾಡಲು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಸೂಚನೆ ನೀಡಿದ್ದರು. ಹೀಗಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡಿಡಿ ಚೆಕ್ ಮಾಡಲಾಗುತ್ತಿದೆ.