ರಾಜ್ಯದಲ್ಲಿ ಕೋಮು ಭಾವನೆಗೆ ಧಕ್ಕೆ ಬರುವಂತಹ ಘಟನೆಗಳು ನಡೆದಾಗ ಅದನ್ನು ನಿಯಂತ್ರಿಸಲು ಸಿಎಂ ಲಾಠಿ ಹಿಡ್ಕೊಂಡು ಬೀದಿಯಲ್ಲಿ ನಿಲ್ಬೇಕಾ? ಎಂದು ಪ್ರಶ್ನಿಸಿರುವ ಕೃಷಿ ಸಚಿವ ಬಿಸಿ ಪಾಟೀಲ್ ಸಿಎಮ್ ಅವರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರ ಎಲ್ಲಿ ಸುಮ್ನೆ ಕುಳಿತಿದೆ. ಸಿಎಂ ಬಸವರಾಜ್ ಬೊಮ್ಮಾಯಿನೂ ಹೌದು. ಬಸವಣ್ಣನೂ ಹೌದು ಆದ್ರೆ ಮೂಕ ಬಸವಣ್ಣ ಅಲ್ಲ. ವಾಸ್ತವದಲ್ಲಿ ಬಸವಣ್ಣ ಸಮಸಮಾಜದ ಕನಸು ಕಂಡವರು. ಆದರೆ ಇಲ್ಲಿ ಸಮಸಮಾಜದ ಕಲ್ಪನೆ ಎತ್ತ ಸಾಗಿದೆ ಎನ್ನುವುದೇ ಆತಂಕದ ಸಂಗತಿಯಾಗಿದೆ ಎಂದರು.
ಯಾರೋ ಏನೋ ಹೇಳಿದ್ರೂ ಅಂತ ಬೀದಿಯಲ್ಲಿ ಸಿಎಂ ಹೋಗಿ ಲಾಠಿ ಹಿಡ್ಕೊಂಡು ನಿಲ್ಲೋಕೆ ಆಗಲ್ಲ, ಅಗತ್ಯತೆ ಇಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಏನೇನೂ ಕ್ರಮ ಕೈಗೊಳ್ಳಬೇಕು ಎಲ್ಲ ಕ್ರಮ ಸಿಎಂ ಕೈಗೊಂಡಿದ್ದಾರೆ.
ಅದೆಲ್ಲವೂ ಅಧಿಕಾರಿಗಳು ಅನುಷ್ಠಾನಕ್ಕೆ ತರ್ತಾರೆ.
ಮಧ್ಯೆ ರಸ್ತೆಯಲ್ಲಿ ನಿತ್ಕೊಂಡು ಸಿಎಂ ಮಾತೋಡೋ ಅವಶ್ಯಕತೆ ಇಲ್ಲ ಎಂದು ಹೇಳಿದರು.