ಬೆಂಗಳೂರು:
ಉಪ ಚುನಾವಣೆ ಗೆಲುವಿನ ಆತ್ಮವಿಶ್ವಾಸದಿಂದ ಬೀಗುತ್ತಿರುವ ಮಾಜಿ ಸಚಿವ ಯೋಗೇಶ್ವರ್ ಇದೀಗ ಹೊಸ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುನ್ನಡೆಸುವ ನಾಯಕರಿಲ್ಲದೇ ಇರುವುದರಿಂದ ನನಗೆ ಟಾಸ್ಕ್ ಕೊಟ್ಟರೆ ಎಲ್ಲ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ
ಜೆಡಿಎಸ್ ಪಕ್ಷವನ್ನು ಕಟ್ಟಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ವಯಸ್ಸಾಗಿದ್ದರಿಂದ ಪಕ್ಷ ಮುನ್ನಡೆಸುವುದು ಕಷ್ಟವಾಗುತ್ತಿದೆ. ಜೊತೆಗೆ, ಪಕ್ಷವನ್ನು ಮುನ್ನಡೆಸಲು ಪರ್ಯಾಯ ನಾಯಕರೂ ಇಲ್ಲವಾಗಿದ್ದಾರೆ. ಇನ್ನು ಕುಮಾರಸ್ವಾಮಿಗೆ ಕೊಟ್ಟರೆ ಕೇವಲ 19 ಸೀಟು ಗೆದ್ದುವ ಮೂಲಕ ಪಕ್ಷದ ಬಲ ಕ್ಷೀಣಿಸುವಂತೆ ಮಾಡಿದ್ದಾರೆ. ಹೀಗಾಗಿ ಅವರೆಲ್ಲರೂ ಬೇಸರಗೊಂಡಿದ್ದಾರೆ ಎಂದು ಹೇಳಿದರು.
ದೇವೆಗೌಡರಿಗೆ ವಯಸ್ಸಾಗಿರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಪರ್ಯಾಯವಾದ ನಾಯಕತ್ವ ಇಲ್ಲ. ಅದೊಂದು ಕುಟುಂಬ ಪಕ್ಷ. ಕುಮಾರಸ್ವಾಮಿ ಅವರು ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು. ಅದೇ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆಲ್ಲಿಸಿದ್ದಾರೆ. ಈ ಎರಡು ಹೋಲಿಕೆ ನೋಡಿದರ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ. ಇದಕ್ಕೆ ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಹೇಳಿದರು.
ದೇವೇಗೌಡರ ಇಡೀ ಕುಟುಂಬವೇ ಹೋರಾಟ ಮಾಡಿದರೂ ಚನ್ನಪಟ್ಟಣದಲ್ಲಿ ಗೆಲ್ಲಲು ಸಾಧ್ಯ ಆಗಲಿಲ್ಲ. ಅವರ ನಂಬಿರುವ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದರೂ ಮನಸ್ಸು ಮಾಡಿದರೆ, ಅವರಿಗೆ ಬೇರೆ ಅವಕಾಶ ನೀಡಲಾಗುವುದು. ಒಂದು ವೇಳೆ ತಪ್ಪಿದರೆ ನೋಡಬಹುದು. ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದರೂ ಇಲ್ಲಿ ಗೆಲ್ಲಲಾಗಲಿಲ್ಲ. ಇನ್ನು ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಪರ್ಯಾಯವಾಗಿ ನಾಯಕತ್ವ ಹುಡುಕುತ್ತಾ ಇದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೊಣ ಎಂದರು.
ದೇವೆಗೌಡರ ಕುಟುಂಬದಿಂದ ಆಚೆ ಬರಬೇಕು ಅಂತಾ ಸಮುದಾಯ ತೀರ್ಮಾನ ಮಾಡಿದೆ. ಈ ಚುನಾವಣೆ ಫಲಿತಾಂಶದಿಂದಲೇ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರುವ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕರಿಗೆ ನೋವಾಗಿದೆ ಎನ್ನುವ ಅರ್ಥದಲ್ಲಿ ಹೇಳಿದ್ದೇನೆ. ಅಲ್ಲಿರುವವರೆಲ್ಲಾ ನನ್ನ ಮಿತ್ರರು ಇದ್ದಾರೆ. ಹೀಗಾಗಿ, ಅವಕಾಶ ಸಿಕ್ಕಿದರೆ ಕಾಂಗ್ರೆಸ್ ಪಕ್ಷಕ್ಕೆ ಕರೆತರುವುದಾಗಿ ನೋಡೊಣವೆಂದು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆಯನ್ನು ನೀಡಿದರು.
ಕುಮಾರಸ್ವಾಮಿ ಅವರು ಈಗಾಗಲೇ ಚನ್ನಪಟ್ಟಣ ನಗರವನ್ನು ಅದ್ವಾನ ಮಾಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಕುಮಾರಸ್ವಾಮಿ ಏನು ಆಸಕ್ತಿ, ಕ್ರಮ ಕೈಗೊಂಡಿಲ್ಲ. ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ನಡೆಸಿ,ಸ್ವಚ್ಛತೆ ಮಾಡುವುದಕ್ಕೆ ಸೂಚನೆ ನೀಡುತ್ತೇನೆ. ಬಸ್ ನಿಲ್ದಾಣ, ರಸ್ತೆಗಳು, ಬೀದಿಗಳಲ್ಲಿ ಕಸ ಸ್ವಚ್ಚತೆ, ಯುಜಿಡಿ ಸಮಸ್ಯೆ ಸರಿಪಡಿಸಲಾಗುವುದು. ಮೊದಲು ಇವೆಲ್ಲವನ್ನೂ ಬಗೆಹರಿಸಬೇಕು. ನಂತರ, ನಿರಂತರವಾಗಿ ತಾಲ್ಲೂಕು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಹೇಳಿದರು.
Previous Articleಸ್ನಾನದ ಮನೆಯಲ್ಲಿ ಶವವಾದಳು.
Next Article ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆ-ಡಿ.10ಕ್ಕೆ ವಿಚಾರಣೆ.


6 Comments
Featuring Paris Hilton as a brand deputy in the recent and in energetic exchange tables, wow vegas casino remains a stopper sweepstakes casino choice. It offers unshackled coins exchange for clowning ad lib plus the thrilling way out to deliver prizes from Sweepstakes Coins.
Featuring Paris Hilton as a brand deputy in the recent and in energetic exchange tables, wow vegas casino remains a stopper sweepstakes casino choice. It offers unshackled coins exchange for clowning ad lib plus the thrilling way out to deliver prizes from Sweepstakes Coins.
Featuring Paris Hilton as a brand deputy in the recent and in energetic exchange tables, wow vegas casino remains a stopper sweepstakes casino choice. It offers unshackled coins exchange for clowning ad lib plus the thrilling way out to deliver prizes from Sweepstakes Coins.
Test your luck in the best slots. In crowncoins casino, deposit bonuses and tournaments await you. Join and triumph!
Experience kings maxxwins Casino magic now. New players get 500 spins for $5 + up to $1K credits on first-day net losses. Spin, win, repeat!
Join the millions winning big on fanduel casino – the #1 tangible in dough casino app in America.
Get your $1000 WITH IT AGAIN bonus and refashion every twirl, hand and rolling into legitimate readies rewards.
Permanent =’pretty damned quick’ payouts, huge jackpots, and continuous action – download FanDuel Casino any longer and start playing like a pro today!