ತೆರಿಗೆ ಮತ್ತು ಗನ್ ಅಪರಾಧಗಳಿಗಾಗಿ ಈ ತಿಂಗಳು ಶಿಕ್ಷೆಯನ್ನು ಎದುರಿಸುತ್ತಿದ್ದ ತನ್ನ ಮಗ ಹಂಟರ್ ಬಿಡೆನ್ ಅವರನ್ನು ತಮ್ಮ ಅಧ್ಯಕ್ಷೀಯ ಅಧಿಕಾರವನ್ನು ಬಳಸಿ ಕ್ಷಮಿಸಿರುವುದಾಗಿ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಘೋಷಿಸಿದ್ದಾರೆ. ಅವರು ಅಧ್ಯಕ್ಷ ಪದವಿಯನ್ನು ಕಚೇರಿಯನ್ನು ತೊರೆಯಲು ತಯಾರಿ ನಡೆಸುತ್ತಿರುವಾಗ ಈ ರೀತಿ ತಮ್ಮ ನಿಲುವಿಗೇ ವ್ಯಹತಿರಿಕ್ತವಾಗಿ ನಡೆದಿದ್ದರೆ.
“ಇಂದು, ನಾನು ನನ್ನ ಮಗ ಹಂಟರ್ ಬೈಡೆನ್ ಗೆ ಕ್ಷಮಾದಾನಕ್ಕೆ ಸಹಿ ಹಾಕಿದ್ದೇನೆ” ಎಂದು ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಷಮಾದಾನದ ದಾಖಲೆಯ ಪ್ರತಿಯ ಪ್ರಕಾರ ಇದು ಅವರು ತಮ್ಮ ಮಗನಿಗೆ ನೀಡಿದ “ಪೂರ್ಣ ಮತ್ತು ಬೇಷರತ್ತಾದ ಕ್ಷಮೆ” ಆಗಿದೆ.
ಈ ಅಧಿಕೃತ ಕ್ಷಮಾದಾನವನ್ನು ಅಧ್ಯಕ್ಷರಾಗಿ ಬರುವ ಬೈಡೆನ್ ಅವರ ವಿರೋಧಿ ಡೊನಾಲ್ಡ್ ಟ್ರಂಪ್ ರದ್ದುಗೊಳಿಸಲಾಗುವುದಿಲ್ಲ. ತನ್ನ ಮಗನನ್ನು ಕ್ಷಮಿಸುವ ಮೂಲಕ, ಜೋ ಬಿಡೆನ್ ಅವರು ತಮ್ಮ ಬೆಂಬಲಿಗರಿಗೆ ನೀಡಿದ ಸಾರ್ವಜನಿಕ ಆಶ್ವಾಸನೆಯನ್ನು ಕಡೆಗಣಿಸಿದ್ದಾರೆ. ಅಧ್ಯಕ್ಷರು ಮತ್ತು ಅವರ ವಕ್ತಾರರು 2024 ರ Electionಯಲ್ಲಿ ಟ್ರಂಪ್ ಗೆದ್ದ ನಂತರವೂ ಕೂಡ ಹಂಟರ್ ಬಿಡೆನ್ ಅವರನ್ನು ಕ್ಷಮಿಸುವುದಿಲ್ಲ ಅಥವಾ ಅವರ ಶಿಕ್ಷೆಯನ್ನು ಕಡಿಮೆಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಮೆರಿಕಾದಲ್ಲಿ ಅಧ್ಯಕ್ಷರು ಕ್ಷಮಾದಾನವನ್ನು ನೀಡಿದರೆ ಆರೋಪಿ ಖುಲಾಸೆಯಾದಂತೆಯೇ. ಆತನ ವಿರುದ್ಧ ಇರುವ ನಿರ್ಬಂಧಗಳೆಲ್ಲ ತೆರವಾಗಿಬಿಡುತ್ತದೆ ಮತ್ತು ಆರೋಪಿ ಶಿಕ್ಷೆಗೆ ಗುರಿಯಾಗುವುದಿಲ್ಲ. ಹೀಗೆ ಜೋ ಬೈಡೆನ್ ತಮ್ಮ ಮಗನ ವಿಚಾರದಲ್ಲಿ ಮಾಡಿರುವುದು ಒಂದು ರೀತಿಯ ನೈತಿಕ ಭ್ರಷ್ಟಾಚಾರ ಎಂದು ಹೇಳಲಾಗಿದೆ.