ಬೆಂಗಳೂರು,ಆ.4- ಎರಡು ದೇವಾಲಯಗಳಿಗೆ ಹೊಂಚು ಹಾಕಿ ನುಗ್ಗಿರುವ ದುಷ್ಕರ್ಮಿಗಳು ಕಳವು ಮಾಡಿರುವ ದಾರುಣ ಘಟನೆ ಕಾಟನ್ ಪೇಟೆಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕಾಟನ್ ಪೇಟೆ ಪೊಲೀಸ್ ಠಾಣೆ ಸಮೀಪದ ಆಂಜನೇಯ ದೇವಾಲಯಕ್ಕೆ ನುಗ್ಗಿದ ಖದೀಮರು, ಬೀಗ ಮುರಿದು ಒಳನುಗ್ಗಿ ಹಣದ ಸಮೇತ ಹುಂಡಿ ಹೊತ್ತೋಯ್ದಿದ್ದಾರೆ.
ಅಲ್ಲದೇ ಆದಿ ನಾರಾಯಣ ದೇವಾಲಯಕ್ಕೂ ಕೂಡ ಕನ್ನ ಹಾಕಿ ಪರಾರಿಯಾಗಿದ್ದಾರೆ.
ಇಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ಕೃತ್ಯ ನಡೆದಿದ್ದು, ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಟನ್ ಪೇಟೆ ಪೊಲೀಸರು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಲವ್ 360′ ಸಿನಿಮಾ ಟ್ರೇಲರ್ ಬಿಡುಗಡೆ
Next Article ಗಲ್ಫ್ ರಾಷ್ಟ್ರಗಳಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್