ಬೆಂಗಳೂರು,ಜ.1:
ಹೊಸ ವರ್ಷವನ್ನು Bengaluru ಸೇರಿದಂತೆ ರಾಜ್ಯಾದ್ಯಂತ ಜನರು ಸಂಭ್ರಮ ಸಡಗರದಿಂದ ಸ್ವಾಗತಿಸಿದ್ದಾರೆ.ರೆಸಾರ್ಟ್, ಹೋಟೆಲ್, ಕ್ಲಬ್ ಗಳಲ್ಲಿ ಸೇರಿದ ಜನರು ಕುಣಿದು ಕುಪ್ಪಳಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ.
ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ದಾಖಲೆ ಮೊತ್ತದಲ್ಲಿ ಮದ್ಯ ಮಾರಾಟವಾಗಿದೆ.
ಕರ್ನಾಟಕ ಪಾನೀಯ ನಿಗಮದ ವರದಿ ಪ್ರಕಾರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಿಯರ್ ಖರೀದಿ ಮಾಡಿರುವ ಮದ್ಯ ಪ್ರಿಯರು ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಸ್ಕಿ ಖರೀದಿ ಮಾಡಿದ್ದಾರೆ
ಕೇವಲ ಅರ್ಧ ದಿನದಲ್ಲಿ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ ಎಂದು ವರದಿ ಹೇಳಿದೆ ಈ ಮೂಲಕ ಅಬಕಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಮದ್ಯ ಮಾರಾಟವಾಗಿದೆ.
ಹೊಸ ವರ್ಷದ ಸಂಭ್ರಮಕ್ಕೆ ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಪಾನೀಯ ನಿಗಮದಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ
Previous Articleಹೊಸ ವರ್ಷದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ.
Next Article ಪತ್ನಿ ಕಿರುಕುಳಕ್ಕೆ ಬಲಿಯಾದ ಪತಿ