ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲೆ ವಿಜಯನಗರದ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ದಿಕ್ಕು ದಿಸೆ ಎರಡು ದಿನದಲ್ಲಿ ನಿರ್ಧಾರವಾಗಲಿದೆ. ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ವಿಧಾನಸಭೆ ಚುನಾವಣೆಗೆ ನೀಲಿನಕ್ಷೆ ಸಿದ್ಧವಾಗುತ್ತಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ಸಂಪುಟ ಪುನಾರಚನೆ ಇಲ್ಲವೆ ಅವಧಿ ಪೂರ್ವ ಚುನಾವಣೆ ಕುರಿತೂ ನಿರ್ಣಯ ಹೊರಬೀಳಲಿದೆ.
ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಯ ಜೊತೆ ಕರ್ನಾಟಕ ವಿಧಾನಸಭೆಗೂ ಚುನಾವಣೆ ನಡೆಸಬೇಕೆನ್ನುವ ಅಭಿಪ್ರಾಯವನ್ನು ಬಿಜೆಪಿ ಚಿಂತಕರ ಚಾವಡಿ ನೀಡಿದೆ. ಇದಕ್ಕೂ ಮುನ್ನ ಬೃಹತ್ ಬೆಂಗಳೂರು ಪಾಲಿಕೆಗೂ ಚುನಾವಣೆ ನಡೆಸಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈ ಅಂಶಗಳ ಬಗ್ಗೆ ಸಭೆಯಲ್ಲಿ ಕೂಲಂಕುಷ ಚರ್ಚೆ ನಡೆಯಲಿದ್ದು, ಇದಕ್ಕೆ ಪೂರಕವಾಗುವ ರೀತಿಯಲ್ಲಿ ಸಂಪುಟ ರಚನೆ ಕುರಿತಂತೆ ತೀರ್ಮಾನಗಳಾಗಲಿವೆ. ಚುನಾವಣೆಗೆ ಹಿಂದುತ್ವ ಅಜೆಂಡಾದ ನೀಲನಕ್ಷೆ ಪ್ರಕಟವಾಗಲಿದ್ದು ಈಸ್ವರಪ್ಪ ರಾಜಿನಾಮೆ ಪ್ರಕರಣದಿಂದ ಜನರ ಗಮನವನ್ನು ಬೇರೆಡ ಸೆಳೆಯುವ ಕಾರ್ಯತಂತ್ರ ರೂಪಿತವಾಗಲಿದ್ದು, ಇದು ಸೋಮವಾರದಿಂದಲೇ ಕಾರ್ಯ ರೂಪಕ್ಕೆ ಬರಲಿದೆ