Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಇಸ್ರೇಲ್ ಗೆ ಯಾಕೆ ಹೀಗಾಯ್ತು?
    ರಾಷ್ಟ್ರೀಯ

    ಇಸ್ರೇಲ್ ಗೆ ಯಾಕೆ ಹೀಗಾಯ್ತು?

    vartha chakraBy vartha chakraJune 17, 2025No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಇಸ್ರೇಲ್ ಒಂದು ಪುಟ್ಟ ದೇಶ. ಎಲ್ಲ ಕಡೆಯೂ ಮುಸಲ್ಮಾನ ದೇಶಗಳು ಸುತ್ತುವರೆದಿರುವ ಸಣ್ಣ ದೇಶ. ಯೆಹೂದಿಗಳು ಅಥವಾ ಜೂವ್ಸ್ ಎಂದು ಕರೆಯಲ್ಪಡುವ ಏಕದೇವೋಪಾಸಕ ಪ್ರಮುಖ ಮೂರು ಧರ್ಮಗಳ ಪೈಕಿ ಒಂದಾಗಿರುವ ಜೂವಿಶ್ ಧರ್ಮದ ಅನುಯಾಯಿಗಳು ಇವರು. ವಿಶ್ವದಾದ್ಯಂತ ಇವರ ಸಂಖ್ಯೆ ಕಡಿಮೆ. ಅನೇಕ ದೇಶಗಳಲ್ಲಿ ಪ್ರತಿಯೊಂದು ಕಾಲಘಟ್ಟದಲ್ಲೂ ದಮನಕ್ಕೆ ಒಳಗಾದ ಈ ಧರ್ಮೀಯರು ಹಿಟ್ಲರ್ ನ ಆಡಳಿತದಲ್ಲಿ ಬಹಳಷ್ಟು ಹಿಂಸೆಯನ್ನನುಭವಿಸಿ ನಶಿಸಲ್ಪಟ್ಟರು. ಆನಂತರ ಇವರಿಗೆ ಇವರ ಮೂಲ ಸ್ಥಳವಾಗಿದ್ದ ಜೆರೂಸಲೇಮ್ ನಗರದ ಸುತ್ತಮುತ್ತಲಿನ ಪ್ರಾಂತ್ಯಗಳನ್ನು ನೀಡಿ ಇವರಿಗೆ ಒಂದು ದೇಶವನ್ನು ಮಾಡಿ ಕೊಡಲಾಯಿತು. ಇವರು ಅಲ್ಲಿ ಬರುವಾಗ ಅಷ್ಟರಲ್ಲೇ ಬಹಳಷ್ಟು ಅರಬರು ಆ ಪ್ರಾಂತ್ಯದಲ್ಲಿದ್ದರು. ಅವರು ತಮ್ಮನ್ನು ಪೆಲಸ್ತೀನಿಯರು ಎಂದು ಕರೆದುಕೊಂಡು ಆ ಭೂಮಿ ತಮ್ಮದು ಎನ್ನುತ್ತಾ ಅನೇಕ ದಶಕಗಳ ಕಾಲ ಹೋರಾಟ ಮಾಡಿದರು. ಕೊನೆಗೆ ಪೆಲಸ್ತೀನಿಯರಿಗೆ ಒಂದಷ್ಟು ಭೂಭಾಗವನ್ನು ನೀಡಲಾಯಿತು. ಆದರೂ ಫೆಲೆಸ್ತೀನಿಯನ್ ಬಂಡುಕೋರರು ಆಗಾಗ್ಗೆ ಇಸ್ರೇಲ್ ಗೆ ತೊಂದರೆ ಮಾಡುತ್ತಿದ್ದರು. ಆದರೆ ಇರಾನ್ ದೇಶ ಅನೇಕ ದಶಕಗಳಿಂದ ಇಸ್ರೇಲ್ ವಿರುದ್ಧ ಕತ್ತಿ ಮಸೆಯುತ್ತಾ ಬಂದಿದೆ. ಮುಸಲ್ಮಾನ ರಾಷ್ಟ್ರಗಳ ಪೈಕಿ ಅಣು ಬಾಂಬ್ ಇರುವುದು ಪಾಕಿಸ್ತಾನದಲ್ಲಿ ಮಾತ್ರ. ಆದರೆ ಇರಾನ್ ಅಣು ಬಾಂಬ್ ಅಭಿವೃದ್ಧಿ ಪಡಿಸುತ್ತಿದೆ ಎನ್ನುವ ವಿಷಯ ಕೇಳಿ ಬರುತ್ತಿತ್ತು. ಅದನ್ನು ತಡೆಯಲು ಅಮೆರಿಕಾ ಕೂಡ ಪ್ರಯತ್ನ ಮಾಡಿದೆ. ತನ್ನ ಸುತ್ತ ಇರುವ ಶ್ರೀಮಂತ ಆದರೆ ಮಿಲಿಟರಿಯಲ್ಲಿ ದುರ್ಬಲ ರಾಷ್ಟ್ರಗಳನ್ನು ಇಸ್ರೇಲ್ ಬಹಳ ವರ್ಷಗಳಿಂದ ತನ್ನ ಗೆಳೆಯ ಅಮೆರಿಕಾದ ಸಹಾಯದೊಂದಿಗೆ ಹೆದರಿಸುತ್ತಾ ಬಂದಿದೆ. ಐಆರ್ನ್ ಡೋಮ್ ಅಥವ ಕಬ್ಬಿಣದ ಗುಮ್ಮಟ ದ ರೀತಿಯಲ್ಲಿ ನಾವು ನಮ್ಮ ದೇಶಕ್ಕೆ ಯಾವ ಮಿಸೈಲ್ ಕೂಡ ಹೊಕ್ಕದಂತೆ ಮಾಡಿಕೊಂಡಿದ್ದೇವೆ. ಅಂಥಾ ತಂತ್ರಜ್ಞಾನ ಇದೆ ಎಂದೆಲ್ಲ ಹೇಳಿಕೊಂಡು ತಮ್ಮ ಮಿಲಿಟರಿ ಪ್ರಾಬಲ್ಯದ ಬಗ್ಗೆ ಬೀಗುತ್ತಿದ್ದರು. ಭಾರತವೂ ಇಸ್ರೇಲ್ ನ ಜೊತೆ ಶಸ್ತ್ರಾಯುಧ ವಿಚಾರದಲ್ಲಿ ಸಹಾಯ ಪಡೆದು ಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಸದ್ಯಕ್ಕೆ ನಡೆಯುತ್ತಿರುವ ಇರಾನ್ ಇಸ್ರೇಲ್ ಯುದ್ಧದಲ್ಲಿ ಇರಾನ್ ನ ಕ್ಷಿಪಣಿಗಳು ಅಯರ್ನ್ ಡೋಮ್ ಅನ್ನು ಛೇದಿಸಿ ಒಳ ಹೊಕ್ಕು ಬಹಳಷ್ಟು ನಷ್ಟ ಮತ್ತು ಸಾವು ನೋವು ಉಂಟು ಮಾಡಿ ಇಸ್ರೇಲ್ ನ ಸಮರ್ಥಕರಲ್ಲಿ ಬಹಳ ಆತಂಕ ಮೂಡಿಸಿದೆ. ಆದರೆ ಅಮೆರಿಕಾದ ಸಹಾಯದ ವಿಶ್ವಾಸವಿರುವ ಇಸ್ರೇಲ್ ಇರಾನ್ ಮೇಲೆ ಇನ್ನೂ ದಾಳಿ ಮುಂದುವರೆಸಿದೆ. ಆದರೆ ಇದುವರೆಗೆ ಇಸ್ರೇಲ್ ಅನ್ನು ಮುಟ್ಟಲು ಯಾರಿಗೂ ಸಾಧ್ಯವೂ ಇಲ್ಲ ಅಯರ್ನ್ ಡೋಮ್ ಅಥವಾ ಥಾಡ್ ತಡೆಯನ್ನು ಭೇದಿಸುವ ದೇಶವಿಲ್ಲ ಎನ್ನುವ ಕಥೆಯೆಲ್ಲ ಬದಲಾಗಿದೆ. ಇಸ್ರೇಲ್ ನಂಬಿಕೊಂಡಿದ್ದವರಲ್ಲೂ ದಿಗಿಲು ಮೂಡಿದೆ.

    Verbattle
    Verbattle
    Verbattle
    ತಂತ್ರಜ್ಞಾನ ಧರ್ಮ
    Share. Facebook Twitter Pinterest LinkedIn Tumblr Email WhatsApp
    Previous Articleಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?
    Next Article ಶಾಲೆಗಳಿಗೆ ಡಿಸಿಎಂ ನೀಡಿದ ಆದೇಶ
    vartha chakra
    • Website

    Related Posts

    AI ಯುಗದಲ್ಲಿ ಅನಲಾಗ್ ಬದುಕಿನತ್ತ ಜನರ ಒಲವು

    January 19, 2026

    ದೆಹಲಿಯಲ್ಲಿ ದಟ್ಟ ಮಂಜು: ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

    January 18, 2026

    ವಿಮಾನ ಸೇವೆ ವ್ಯತ್ಯಯ: ಇಂಡಿಗೋಗೆ ಭಾರಿ ದಂಡ!

    January 18, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    ಜನರ ಆಸ್ತಿ ಕಾರ್ಪೊರೇಟ್ ಪಾಲು: ಇದು ಅಭಿವೃದ್ಧಿಯೋ ಅಥವಾ ಅಪಾಯದ ಮುನ್ಸೂಚನೆಯೋ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RicardoCor on ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ.
    • Bobbystume on ಚಿನ್ನದಂಗಡಿಗಳಿಗೆ IT shock!
    • RicardoCor on ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದ ಕರ್ನಾಟಕ
    Latest Kannada News

    ಪ್ರಜ್ವಲ್ ರೇವಣ್ಣ ಜೈಲಿಗೆ ಕಳುಹಿಸಿದ ಪೊಲೀಸರಿಗೆ ಬಹುಮಾನ

    January 23, 2026

    ಮತ್ತೆ ಬೆಂಗಳೂರಿನ ರಸ್ತೆಗಿಳಿಯಲಿವೆ ಬೈಕ್ ಟ್ಯಾಕ್ಸಿಗಳು

    January 23, 2026

    ಜನಾರ್ದನ ರೆಡ್ಡಿಗೆ ಬಿಕೆ ಹರಿಪ್ರಸಾದ್ ಸವಾಲು

    January 23, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.