ವಾರಣಾಸಿ:
ಪ್ರವಾಸಕ್ಕೆ ತೆರಳಿದ ಸಮಯದಲ್ಲಿ ಉಳಿದುಕೊಳ್ಳಲು ಯಾವುದಾದರು ಅತಿಥಿ ಗೃಹ, ಹೋಟೆಲ್ ,ಹೋಂ ಸ್ಟೇ ,ಇತ್ಯಾದಿಗಳನ್ನು ಪ್ರವಾಸಿಗರು ಆಶ್ರಯಿಸುತ್ತಾರೆ. ಇಲ್ಲಿ ಒಂದೆರಡು ದಿನ ವಾಸ್ತವ್ಯಹೂಡಿ ಆನಂತರ ಮುಂದಿನ ಸ್ಥಳ ಇಲ್ಲವೇ ತಮ್ಮ ಊರಿನತ್ತ ಪ್ರಯಾಣ ಮಾಡುತ್ತಾರೆ.
ಆದರೆ ಇಲ್ಲಿ ನಾವು ಹೇಳುತ್ತಿರುವುದು ಕೊಂಚ ಭಿನ್ನವಾದ ಸ್ಟೋರಿ.ಇಲ್ಲಿ ಅತಿಥಿಗಳ ವಾಸ್ತವ್ಯಕ್ಕಾಗಿ ಕೆಲವು ಹೋಟೆಲ್ ಮತ್ತು ಅತಿಥಿ ಗೃಹಗಳಿವೆ. ಇಲ್ಲಿಗೆ ಹೋದವರು ಜೀವಂತವಾಗಿ ವಾಪಸ್ ಬರೋದೇ ಇಲ್ಲ. ಇಂತಹ ಸ್ಥಳಗಳಿಗೆ ಹೋಗುವ ವ್ಯಕ್ತಿಗಳಿಗೆ ಮತ್ತೆ ತಾವು ಜೀವಂತವಾಗಿ ವಾಪಸ್ ಬರುವುದಿಲ್ಲ ಎಂಬುದು ತಿಳಿದಿರುತ್ತದೆ ಆದರೂ ಕೂಡ ಇಲ್ಲಿ ರೂಮುಗಳನ್ನು ಕಾಯ್ದಿರಿಸಿ ವಾಸ್ತವ್ಯ ಹೂಡುತ್ತಾರೆ.
ಅದು ಯಾಕೆ ಹೀಗೆ ಅನ್ನೋದು ತಿಳಿಯಬೇಕಾದರೆ ಈ ಸ್ಟೋರಿ ನೋಡಿ.
ಪವಿತ್ರ ಗಂಗೆಯ ಮಡಿಲು, ವಿಶ್ವನಾಥನ ಪುಣ್ಯಸ್ಥಾನ ಕಾಶಿ , ಹಿಂದೂ ಧರ್ಮೀಯರ ಪವಿತ್ರ ಭೂಮಿ. ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಹಿಂದೂ ಆಸ್ತಿಕ ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಬೇಕು. ಪವಿತ್ರ ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಾಡುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೆ.
ಅದರಲ್ಲೂ ಕಾಶಿಯ ಗಂಗಾ ನದಿಯ ತಟದಲ್ಲಿ ಪ್ರಾಣ ಬಿಟ್ಟು ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿದರೇ ಅಂತಹ ವ್ಯಕ್ತಿ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ವಿಷ್ಣುವಿನ ಪಾದ ಸೇರುವ ಮೂಲಕ ಮುಕ್ತಿ ಪಡೆಯುತ್ತಾರೆ ಎಂಬ ಬಲವಾದ ನಂಬಿಕೆ ಇದೆ.
ಹೀಗಾಗಿಯೇ ಕಾಶಿಯ ಗಂಗಾ ನದಿಯ ತೀರದ ಘಾಟ್ ಗಳು ಅಂತ್ಯ ಸಂಸ್ಕಾರ ಹಾಗೂ ಪಿಂಡ ಪ್ರಧಾನದ ಕೇಂದ್ರಗಳಾಗಿ ಪರಿಗಣಿಸಿವೆ. ದಿನ ನಿತ್ಯ ನೂರಾರು ಮೃತ ದೇಹಗಳಿಗೆ ಇಲ್ಲಿ ಅಗ್ನಿ ಸ್ಪರ್ಶ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಕರ್ಮ ಸಿದ್ಧಾಂತದಲ್ಲಿ ನಂಬಿಕೆಯಿರುವ ಹಲವರು ಕಾಶಿಯಲ್ಲಿ ಕೊನೆಯುಸಿರೆಳೆಯುವ ಮೂಲಕ ಮುಕ್ತಿ ಹೊಂದಬೇಕು ಎಂದು ಬಯಸುತ್ತಿದ್ದಾರೆ. ಈ ಬಯಕೆಯನ್ನು ಅರ್ಥ ಮಾಡಿಕೊಂಡ ವಾರಣಾಸಿಯ ಕೆಲವು ಹೋಟೆಲ್ ಮತ್ತು ಆತಿಥ್ಯ ಗೃಹಗಳ ಮಾಲೀಕರು, ಗುಣ ಪಡಿಸಲಾಗದ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರು, ಜೀವನದ ಸಂಧ್ಯಾ ಕಾಲದಲ್ಲಿರುವವರಿಗಾಗಿ ಕೊಠಡಿಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಿದ್ದಾರೆ ಇಲ್ಲಿ ಪಂ
ತಂಗಲಿರುವ ಇಂತಹ ವ್ಯಕ್ತಿಗಳು ತಮ್ಮ ಕೊನೆ ಉಸಿರೆಳೆಯುವವರೆಗೆ ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ ಇವರು ಮೃತಪಟ್ಟ ನಂತರ ಗಂಗಾ ನದಿಯ ತೀರದಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ
Previous Articleಇವರೇ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ.
Next Article ಬಡ್ಡಿ ಹಾಕಿದರೆ 10 ವರ್ಷ ಜೈಲು.