ಬೆಂಗಳೂರು,ಮೇ.8-
ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಪಾತಕಿ ಉಗ್ರರನ್ನು ಹೊಡೆದುರುಳಿಸಿದ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ ನಂಟಿದೆ.
ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಬಳಸಲಾದ ಆತ್ಮಹುತಿ ಡ್ರೋನ್‌ಗಳು ಬೆಂಗಳೂರಿನಲ್ಲಿ ತಯಾರಾಗಿವೆ. ಈ ಡ್ರೋನ್‌ಗಳು ನಿಖರವಾಗಿ ಗುರಿಯನ್ನು ಪತ್ತೆಹಚ್ಚಿ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ.
ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ ಡ್ರೋನ್ ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಬಳಸಲಾಗಿದ್ದು ಉಗ್ರರನ್ನು ಹೊಡೆದುರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಲ್ಲಿರುವ ಒಂಬತ್ತು ಉಗ್ರಗಾಮಿ ನೆಲೆಗಳ ಮೇಲಿನ ಈ ಪ್ರತೀಕಾರದ ದಾಳಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್‌ಗಳನ್ನು ಬಳಸಲಾಗಿದೆ. ಆತ್ಮಾಹುತಿ ಡ್ರೋನ್ ಇದು ಒಂದು ರೀತಿಯ ಸ್ವಯಂಚಾಲಿತ ಆಯುಧ. ಇವು ಸಾಮಾನ್ಯ ಡ್ರೋನ್‌ಗಳಂತೆ ಗಾಳಿಯಲ್ಲಿ ಹಾರಾಡುತ್ತವೆ, ಆದರೆ ಗುರಿಯನ್ನು ಪತ್ತೆ ಹಚ್ಚಿದ ತಕ್ಷಣ ಅದರ ಮೇಲೆ ನೇರವಾಗಿ ದಾಳಿ ಮಾಡಿ ಸ್ಫೋಟಗೊಳ್ಳುತ್ತವೆ. ಅದಕ್ಕಾಗಿಯೇ ಇವುಗಳನ್ನು “ಕಾಮಿಕಾಜೆ ಡ್ರೋನ್‌ಗಳು” ಎಂದೂ ಕರೆಯುತ್ತಾರೆ.
ಬಾಲಕೋಟ್ ದಾಳಿ ಬಳಿಕ ಈ ಡ್ರೋನ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.
ಪಶ್ಚಿಮ ಬೆಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಈ ಆತ್ಮಹತ್ಯಾ ಡ್ರೋನ್‌ಗಳ ನಿರ್ಮಾಣವಾಗಿದೆ. ಆಲ್ಫಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಡ್ರೋನ್ ತಯಾರಿಕೆಯನ್ನು ಮಾಡುತ್ತವೆ. ಈ ಎರಡು ಕಂಪನಿಗಳ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. 2021ರಲ್ಲಿ 100 ಡ್ರೋನ್‌ಗಳಿಗೆ ಭಾರತೀಯ ಸೇನೆ ಖರೀದಿಗೆ ಆರ್ಡರ್ ನೀಡಿತ್ತು.
100 ಕಿಮೀ ದೂರದವರೆಗೆ ಚಲಿಸಬಲ್ಲ ಈ ಡ್ರೋನ್‌ಗಳು 5 ರಿಂದ 10 ಕೆಜಿ ಸಿಸ್ಟಮ್‌ನ್ನುತ ತೆಗೆದುಕೊಂಡು ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಡ್ರೋನ್‌ಗಳ ಚಲನೆ ಮಾತ್ರ ನಿಶ್ಯಬ್ಧವಾಗಿರುತ್ತವೆ. ಹಾಗಾಗಿ ಇವುಗಳ ಚಲನೆ ರಹಸ್ಯವಾಗಿರುತ್ತದೆ.
100 ಕಿಮೀ ದೂರದವರೆಗೆ ಚಲಿಸಬಲ್ಲ ಈ ಡ್ರೋನ್‌ಗಳು 5 ರಿಂದ 10 ಕೆಜಿ ಸಿಸ್ಟಮ್ ಅನ್ನು ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿವೆ.
ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಡ್ರೋನ್‌ಗಳ ಚಲನೆ ಮಾತ್ರ ನಿಶ್ಯಬ್ಧವಾಗಿರುತ್ತವೆ. ಹಾಗಾಗಿ ಇವುಗಳ ಚಲನೆ ರಹಸ್ಯವಾಗಿರುತ್ತದೆ. ಈ ಡ್ರೋನ್‌ಗಳ ಬಗ್ಗೆ ಪ್ರತಿಕ್ರಿಯಿಸಲು ಆಲ್ಫಾ ಡಿಸೈನ್‌ನ ಸಿಎಂಡಿ, ಕರ್ನಲ್ (ನಿವೃತ್ತ) ಎಚ್‌ಎಸ್ ಶಂಕರ್ ನಿರಾಕರಿಸಿದ್ದಾರೆ.
