ನವದೆಹಲಿ:
ಮಾರಣಾಂತಿಕ ಎಚ್ಐವಿ ಸೋಂಕಿತರ ಸಂಖ್ಯೆ ಭಾರತದಲ್ಲಿ ಕಡಿಮೆಯಾಗುತ್ತಾ ಸಾಗಿದೆ. ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತ ಇದೀಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಸೋಂಕಿನ ಬಗ್ಗೆ ಸರ್ಕಾರಗಳು ಮೂಡಿಸುತ್ತಿರುವ ಎಚ್ಚರಿಕೆ ಮತ್ತು ಸಮುದಾಯದಲ್ಲಿ ಹೊಂದಿರುವ ಜಾಗೃತಿಯ ಪರಿಣಾಮವಾಗಿ ಇದು ಸಾಧ್ಯವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಸ್ವಯಂ ಸೇವಾ ಸಂಘಟನೆ ಏಡ್ಸ್ ನಿಯಂತ್ರಣ ಸಂಸ್ಥೆ ಸರ್ಕಾರದ ನೆರವಿನೊಂದಿಗೆ ಅಧ್ಯಯನ ನಡೆಸಿ ಪಿಎಂಪಿಎಸ್ಇ( PMPSE) ವರದಿ ಬಿಡುಗಡೆ ಮಾಡಿದೆ ಇದರ ಪ್ರಕಾರ ಕರ್ನಾಟಕದಲ್ಲಿ ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಮಹಿಳಾ ಲೈಂಗಿಕ ಕಾರ್ಯಕರ್ತರು ಇದ್ದಾರೆ.
ಮಹಿಳಾ ಲೈಂಗಿಕ ಕಾರ್ಯಕರ್ತೆಯರ ಕುರಿತು ಈ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕವು ಶೇ. 15.4 ರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಆಂಧ್ರಪ್ರದೇಶ (ಶೇ. 12.0), ಮಹಾರಾಷ್ಟ್ರ (ಶೇ. 9.6), ದೆಹಲಿ (ಶೇ. 8.9) ಮತ್ತು ತೆಲಂಗಾಣ (ಶೇ. 7.6) ಇವೆ ಎಂದು ಪ್ರೋಗ್ರಾಮ್ಯಾಟಿಕ್ ಮ್ಯಾಪಿಂಗ್ ಮತ್ತು ಜನಸಂಖ್ಯಾ ಗಾತ್ರದ ಅಂದಾಜು (PMPSE) ಹೇಳಿದೆ.
ಈ ಐದು ರಾಜ್ಯಗಳು ದೇಶದ ಒಟ್ಟು ಲೈಂಗಿಕ ಕಾರ್ಯಕರ್ತೆಯರ ಪ್ರಮುಖ ಜನಸಂಖ್ಯೆಯ ಗಾತ್ರದಲ್ಲಿ ಶೇ. 53.0 ರಷ್ಟು ಕೊಡುಗೆ ನೀಡುವ ಅತಿ ಹೆಚ್ಚು ಲೈಂಗಿಕ ಕಾರ್ಯಕರ್ತೆಯರ ಪ್ರಮಾಣವನ್ನು ಹೊಂದಿರುವ ರಾಜ್ಯಗಳಾಗಿವೆ” ಎಂದು ಅದು ಹೇಳಿದೆ.
ಅದೇ ರೀತಿಯಲ್ಲಿ ಹೆಚ್ಐವಿ ಸೋಂಕು ಪೀಡಿತರ ಪ್ರಮಾಣದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇವೆ.
ಏಡ್ಸ್ ನಿಯಂತ್ರಣ ಸಂಸ್ಥೆ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 32 ರಾಜ್ಯಗಳ 651 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ತಯಾರಿಸಿದೆ.
ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
Previous Articleವಿಮಾನ ನಿಲ್ದಾಣದಲ್ಲಿ ಮತ್ತೊಂದು ಸೌಲಭ್ಯ.
Next Article ಕರಾವಳಿಯಲ್ಲಿ ಕೋಮು ಗಲಭೆಗೆ ಇವರೆ ಕಾರಣವಂತೆ ನೋಡಿ !
