ಕರ್ನಾಟಕದಲ್ಲಿ ಸಧ್ಯಕ್ಕೆ ಇರುವ ಹುಲಿಗಳ ಸಂಖ್ಯೆ 563. ಇದು 2018 ರ ಗಣತಿಗಿಂತ 39 ಹೆಚ್ಚು. ಅಂತಾರಾಷ್ಟ್ರೀಯ ಹುಲಿ ದಿನದ ಸಂದರ್ಭದಲ್ಲಿ ಬಿಡುಗಡೆಯಾದ ಅಖಿಲ ಭಾರತ ಹುಲಿ ಅಂದಾಜು 2022 ವರದಿಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 785 ಹುಲಿಗಳೊಂದಿಗೆ ಮಧ್ಯಪ್ರದೇಶ ತನ್ನ ನಂ 1 ಸ್ಥಾನವನ್ನು ಉಳಿಸಿಕೊಂಡಿದೆ.
2018 ರಲ್ಲಿ ಎರಡು ರಾಜ್ಯಗಳ ನಡುವಿನ ಅಂತರವು 222 ಕ್ಕೆ ಏರಿದೆ. ಮಧ್ಯ ಪ್ರದೇಶ ತನ್ನಲ್ಲಿರುವ ಹುಲಿಗಳ ಬಗ್ಗೆ ಖಚಿತವಾದ ಅಂಕಿಅಂಶಗಳನ್ನು ದಾಖಲಿಸಿದೆ. 560 ಹುಲಿಗಳೊಂದಿಗೆ ಉತ್ತರಾಖಂಡ ರಾಜ್ಯ ಮೂರನೇ ಸ್ಥಾನದಲ್ಲಿದೆ. ಅರಣ್ಯ ಮಂತ್ರಿಈಶ್ವರ ಬಿ ಖಂಡ್ರೆ ಮಾತನಾಡಿ, ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 2018 ರಲ್ಲಿ 524 ರಿಂದ 2022 ರ ಗಣತಿಯಲ್ಲಿ 563 ಕ್ಕೆ ಏರಿಕೆಯಾಗಿದ್ದು, ರಾಜ್ಯವು ದೇಶದ ಎರಡನೇ ಅತಿ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶವಾಗಿದೆ ಎಂದು ಗಮನಿಸುವುದು ಹರ್ಷದಾಯಕವಾಗಿದೆ ಎಂದಿದ್ದಾರೆ. ಹುಲಿಗಳ ಸಂರಕ್ಷಣೆಯ ಬಗ್ಗೆ ರಾಜ್ಯದ ಜನರಲ್ಲಿ ಅರಿವು ಮೂಡಿಸುವುದು ಕೂಡ ಅರಣ್ಯ ಇಲಾಖೆಯ ಆದ್ಯತೆ ಆಗಬೇಕು ಎಂದು ಸಂರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ತಜ್ಞರು ಹೇಳಿದ್ದಾರೆ.