ಬೆಂಗಳೂರು,ಸೆ.21- ಪ್ರತಿಪಕ್ಷ ಕಾಂಗ್ರೆಸ್ ನ ಪೇ ಸಿಎಂ ಅಭಿಯಾನಕ್ಕೆ
ಆಡಳಿತಾರೂಢ ಬಿಜೆಪಿ ತಿರುಗೇಟು ನೀಡಿದೆ.ಕಾಂಗ್ರೆಸ್ ಮಾಡಿರುವಂತೆ ಕ್ಯೂ ಆರ್ ಕೋಡ್ ಮಾಡಿ ಬಿಡುಗಡೆ ಮಾಡಿರುವ ಬಿಜೆಪಿ ಕಾಂಗ್ರೆಸ್ ನ ಈ ಗಂಜಿ ಗಿರಾಕಿಗಳಿಂದ ದೂರವಿರಿ ಎಂದು ಮನವಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವನ್ನು ಕ್ಯೂಆರ್ ಕೋಡ್ ಮಾಡಿ ಹಾಕುವ ಮೂಲಕ ಕಾಂಗ್ರೆಸ್ ನ ಹೋರಾಟಕ್ಕೆ ತಿರುಗೇಟು ನೀಡಿದೆ.
ಪೇಟಿಎಂ ಮಾದರಿಯಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರ ಹಾಕಿರುವ ಬಿಜೆಪಿ, ರಾಜ್ಯವನ್ನು ಹಾಳು ಮಾಡಿ ಲೂಟಿ ಮಾಡಿರುವ ಈ ಭ್ರಷ್ಟ ಜೋಡಿಗಳನ್ನು ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ ಎಂದು ಮನವಿ ಮಾಡಿದೆ.
ಮತ್ತೊಂದು ಕ್ಯೂಆರ್ ಕೋಡ್‌ನಲ್ಲಿ ಹೀಗೆ ಉಲ್ಲೇಖಿಸಲಾಗಿದೆ ” ಸಾರ್ವಜನಿಕರ ಗಮನಕ್ಕೆ, ಯಾವುದೇ ಕಾರಣಕ್ಕೂ ಈ ಭ್ರಷ್ಟ ಜೋಡಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ, ಇವರು ಬಂದರೆ ನಿಮ್ಮ ಹತ್ತಿರ ಸುಳಿದಾಡಲು ಬಿಡಬೇಡಿ, ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿದ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರ ಇರಿ “ಎಂದು ಕರೆ ನೀಡಿದೆ.
ಜೊತೆಗೆ ರೀಡೂ ಖ್ಯಾತಿಯ ಸಿದ್ದರಾಮಯ್ಯ, ತಿಹಾರ್ ಜೈಲಿನ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಡಿ ಎಂದು ಕರೆ ಕೊಟ್ಟಿದೆ.
Previous Articleಕುಖ್ಯಾತ ಕನ್ನಗಳ್ಳ ಮೋರಿ, ಸೂರಿ ಸೆರೆ
Next Article Blast trial ನಡೆಸಿದ್ದ ಶಂಕಿತ ಉಗ್ರ