ಬೆಂಗಳೂರು,ಫೆ.15-
ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತ ನಿಗಮ ಅಧ್ಯಕ್ಷ ಬಿ.ಕೆ ಅಲ್ತಾಫ್ ಖಾನ್ ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು,ಈ ಸಂಬಂಧ ಜೆ.ಜೆ.ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಕಳೆದ ಫೆ.5 ರಂದು ರಾತ್ರಿ 8ಗಂಟೆಯ ವೇಳೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಅಲ್ತಾಫ್ ಖಾನ್ ಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ವ್ಯಕ್ತಿ ನೀನು ಪಿಎಫ್ಐ ಸಂಘಟನೆಯವರೊಂದಿಗೆ ಆಟವಾಡಬೇಡ, ಆರ್ಎಸ್ಎಸ್ ಏಜೆಂಟ್ ಆಗಿ ಕೆಲಸ ಮಾಡಬೇಡ. ನಾಳೆ ನಿನ್ನ ಮಗಳ ಮದುವೆ ಇದೆ. ನಮ್ಮಿಂದ ನೀನು ಹಲವು ಬಾರಿ ಬಚಾವ್ ಆಗಿದ್ದೀಯಾ. ಇನ್ಮುಂದೆ ನೀನು ಬಚಾವ್ ಆಗಲು ಆಗಲ್ಲ. ನಿನ್ನ ತಮ್ಮಂದಿರನ್ನು ನೀನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ. ನೀನು ನ್ಯಾಯಾಲಯದಲ್ಲಿ ಕೇಸ್ಗೆ ಸಾಕ್ಷಿ ಹೇಳಲು ಹೋಗಬಾರದು. ಹೋದರೇ ನೀನೇ ಉಳಿಯುವುದಿಲ್ಲ. ಆರ್ಎಸ್ಎಸ್ಗೆ ಚಮಚಗಿರಿ ಮಾಡಿದರೆ ಪಿಎಫ್ಐ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
ಪ್ರಕರಣ ಜೆಜೆ ನಗರ ಠಾಣೆಯಿಂದ ಸಿಸಿಬಿಗೆ ವರ್ಗಾವಣೆವಾಗಿದೆ. ಸಿಸಿಬಿ ಅಧಿಕಾರಿಗಳ ತನಿಖೆ ವೇಳೆ ದುಬೈ ನಿಂದ ಅಲ್ತಾಫ್ ಗೆ ಕರೆ ಮಾಡಿರುವುದು ಬಯಲಾಗಿದೆ.
ದುಬೈ ಮೂಲದ ವ್ಯಕ್ತಿ ಜೊತೆ ಸಂಪರ್ಕ ದಲ್ಲಿದ್ದವನನ್ನು ಸಿಸಿಬಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದೆ.
ಕಾಂಗ್ರೆಸ್ ನಾಯಕ ಅಲ್ತಾಫ್ ಗೆ ಬೆದರಿಕೆ ಹಾಕಿದವನು ಹೇಳಿದ್ದೇನು ಗೊತ್ತಾ.
Previous Articleಮಡಿಕೇರಿ ಜನರ ಭರವಸೆಯ ಬೆಳಕು, ಮಂತರ್ ಗೌಡ.
Next Article Infosys ಗೆ ಹೇಳೋರು ಕೇಳೋರು ಯಾರೂ ಇಲ್ಲವಾ.?