Bengaluru
ಕಾಂತಾರ ದಂತಕಥೆ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ರಿಷಬ್ ಶೆಟ್ಟಿ ತಮ್ಮ ಈ ಸಿನಿಮಾದ ಯಶಸ್ವಿನಿಂದಾಗಿ ಕಾಂತಾರ-2 ನಿರ್ಮಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. ಆದರೆ ಈ ಸಿನೆಮಾಗೆ ಆಗಾಗ ಅಲ್ಲಲ್ಲಿ ಅಡ್ಡಿ ಆತಂಕಗಳು ನಿರ್ಮಾಣವಾಗುತ್ತಿದೆ.
ಇದೀಗ ಹೊಸದಾಗಿ ಈ ಸಿನಿಮಾ ವಿರುದ್ಧ ಅತ್ಯಂತ ಗಂಭೀರ ಆರೋಪ ಕೇಳಿಬಂದಿದೆ ಅದು ಏನು ಎಂದರೆ ಅರಣ್ಯಕ್ಕೆ ಬೆಂಕಿ ಹಾಕಿರುವ ಆರೋಪ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ‘ಕಾಂತಾರ -2’ ಚಿತ್ರದ ಶೂಟಿಂಗ್ ನಡೆಯುತ್ತಿದೆ.ಕಳೆದ ಜನವರಿ 2ರಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕೆ ಪರವಾನಿಗೆ ಪಡೆದಿದೆ.ಚಿತ್ರತಂಡ ಈ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರ ನಾಶ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಹೆರೂರು ಗ್ರಾಮದ ಹಲವರು ಚಿತ್ರತಂಡ ಅನಗತ್ಯವಾಗಿ ಬೆಂಕಿ ಹಚ್ಚುವ ಮೂಲಕ ಪರಿಸರ ನಾಶ ಮಾಡುತ್ತಿದೆ. ಇದು ಹಚ್ಚಿರುವ ಬೆಂಕಿಯಿಂದ ಹಲವೆಡೆ ಅರಣ್ಯದ ಅಂಚಿನಲ್ಲಿರುವ ಕೆಲವು ಅಪರೂಪದ ಪ್ರಭೇದದ ಸಸ್ಯ ಸಂಕುಲ ನಾಶವಾಗಿದೆ ಎಂದು ಆರೋಪಿಸಲಾಗಿದೆ
Previous Articleಸೈಫ್ ಅಲಿ ಖಾನ್ ಗೆ ಚಾಕು ಹಾಕಿದ್ದು ಯಾರು ಗೊತ್ತಾ
Next Article ಅಪರೂಪದ ತೋಳದ ಮರಿಗಳು