ಬೆಂಗಳೂರು, ಡಿ. 26:
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯದ ಜಮೀನಿನಲ್ಲಿ 32 ಜೀವಂತ ನಾಡಬಾಂಬ್ಗಳು ಪತ್ತೆ ಆಗಿದ್ದು,ಆತಂಕಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಸರ್ವೆ ನಂಬರ್ 61ರಲ್ಲಿ
ನಾಡಬಾಂಬ್ ಪತ್ತೆ ಆಗಿವೆ. ನಾಡಬಾಂಬ್ ಪತ್ತೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಬರ್ಕತ್, ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗಾಗಿ ನಾಲ್ವರು ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳನ್ನ ಕಂಡು 2 ಬೈಕ್ ಬಿಟ್ಟು ನಾಲ್ವರು ಪರಾರಿಯಾಗಿದ್ದಾರೆ. ಗಸ್ತು ತಿರುಗುತ್ತಿದ್ದಾಗ ರಸ್ತೆ ಬದಿ 2 ಬೈಕ್ಗಳನ್ನು ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ಅನುಮಾನಗೊಂಡು ಕಾಡಿನೊಳಗೆ ಹೋದಾಗ ಬಾಂಬ್ ಇಡಲು ನಾಲ್ವರು ಸಂಚು ರೂಪಿಸಿರುವುದು ತಿಳಿದುಬಂದಿದೆ.
ಬಾಂಬ್ ಇಡಲು ಬಂದಿದ್ದ ನಾಲ್ವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಮಾದಾಪುರ ಗ್ರಾಮದ ತಿಮ್ಮಪ್ಪ ಮತ್ತು ಗುಡ್ಡಪ್ಪ ಎಂಬುದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಜೈಲಿಗಟ್ಟಿದ್ದಾರೆ. ಇನ್ನು ಉಳಿದ ಇಬ್ಬರ ಮಾಹಿತಿಯನ್ನು ನ್ಯಾಮತಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಹಿಂದೆಯೂ ಆರೋಪಿಗಳು ಇದೇ ಅರಣ್ಯದಲ್ಲಿ ನಾಡಬಾಂಬ್ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
Previous Articleತಿರುಪತಿ ದರ್ಶನ ಹೆಸರಲ್ಲಿ ಶಾಸಕರಿಗೆ ಪಂಗನಾಮ.
Next Article ಯಾರು ಅತಿ ಹೆಚ್ಚು ಮಾಂಸ ತಿನ್ನುವುದು ಗೊತ್ತಾ.