ಹುಬ್ಬಳ್ಳಿ ಗಲಭೆ ಹಿಂದೆ ಕಾಣದ ಕೈಗಳಿರುವ ಶಂಕೆ ಇದೆ. ಪೊಲೀಸ್ ಜೀಪ್ ಮೇಲೆ ಹತ್ತಿ ಶಾಂತಿ ಕಾಪಾಡಿ ಎಂದು ಕೂಗುವುದು, ಇನ್ನೊಬ್ಬರು ಕಿಡಿಗೇಡಿಗಳಿಗೆ ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಹೇಳಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಹುಬ್ಬಳ್ಳಿ ಘಟನೆ ಹಾಗೂ ಬೆಂಗಳೂರಿನ ಕೆ.ಜಿ.ಹಳ್ಳಿ ಘಟನೆಗೆ ಸಾಮ್ಯತೆ ಇದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಕಾಂಗ್ರೆಸ್‍ನವರಿಗೆ ಆರೋಪ ಮಾಡಲು ಯಾವುದೇ ವಿಚಾರವಿಲ್ಲ. ಹಾಗಾಗಿ ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿದೆ ಎಂದು ದೂರಿದರು
ಕಾಂಗ್ರೆಸ್‍ನ ತುಷ್ಟೀಕರಣ ನೀತಿಯಿಂದ ಇದೆಲ್ಲ ಆಗಿದೆ. ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ ಇಡೀ ಹುಬ್ಬಳ್ಳಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿತ್ತು ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಅಮಾಯಕ ವ್ಯಕ್ತಿಗಳನ್ನು ಬೀದಿಗೆ ಇಳಿಸಿದ್ದಾರೆ. ಒಂದು ಕೋಮಿನ ಬಗ್ಗೆ ತಪ್ಪು ಭಾವನೆ ಆಗುವ ರೀತಿ ಕೆಲವು ಸಂಘಟನೆಗಳು ನಡೆದುಕೊಳ್ಳುತ್ತಿವೆ ಎಂದು ಹೇಳಿದರು.