ಬೆಂಗಳೂರು,ಆ.30-ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಗಳ. ಪರಿಹಾರವನ್ನು ಪ್ರಕರಣ ಸಂಬಂಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಘೋಷಿಸಿದೆ.
ಸಂತ್ರಸ್ತ ಕುಟುಂಬಗಳಿಗೆ ನಾವು ನೀಡುತ್ತಿರುವುದು ಆರ್ಥಿಕ ನೆರವಲ್ಲ. ತಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ನಾವು ಕೊಡುತ್ತಿರುವುದು ಕಾಳಜಿ ಮತ್ತು ಸಹಾನುಭೂತಿಯ ಫಲ ಎಂದು ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಘೋಷಣೆ ಮಾಡಿದೆ.
ಕಳೆದ ಜೂ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಕೇಳಿ ನಮ ಹೃದಯಗಳು ಛಿದ್ರವಾಗಿಸಿವೆ. ಈ ಘಟನೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳಲು ನಮಲ್ಲಿ ಪದಗಳಿಲ್ಲ. ನಾವು ನೀಡುತ್ತಿರುವ ಪರಿಹಾರ ನೊಂದ ಕುಟುಂಬವನ್ನು ಪರಿಹರಿಸುತ್ತದೆ ಎಂಬ ಭಾವನೆಯೂ ಇಲ್ಲ. ಆದರೆ ನಿಮ ನೋವಿನಲ್ಲಿ ನಾವಿದ್ದೇವೆ. ನಿಮ ಧ್ವನಿಗೆ ನಾವು ದನಿಯಾಗುತ್ತೇವೆ ಎಂದು ಹೇಳಿದೆ.ನಾವು ಕೊಡುವ ಹಣದಿಂದ ನಿಮನ್ನು ಬಿಟ್ಟು ಹೋದವರ ಜಾಗವನ್ನು ತುಂಬಲು ಸಾಧ್ಯವೇ ಇಲ್ಲ.
ನಾವು ಎಷ್ಟೇ ಬೆಂಬಲ ನೀಡಿದರೂ ನಿಮಗಾಗಿರುವ ಘಾಸಿಯನ್ನು ವಾಸಿ ಮಾಡುವುದಿಲ್ಲ. ಆದರೆ ನಿಮ ನೋವಿಗೆ ನಾವು ಸ್ಪಂದಿಸಿ ಅತ್ಯಂತ ಗೌರವದಿಂದ ಕುಟುಂಬಕ್ಕೆ 25 ಲಕ್ಷ ಪರಿಹಾರ ಒದಗಿಸುತ್ತಿದ್ದೇವೆ. ಇದನ್ನು ಯಾರೊಬ್ಬರು ಆರ್ಥಿಕ ನೆರವು ಎಂದು ಭಾವಿಸಬೇಡಿ. ಮನುಷ್ಯತ್ವ, ಮಾನವೀಯತೆ, ಸಹಾನುಭೂತಿ, ಏಕತೆ ಹಾಗೂ ನಿರಂತರ ಆರೈಕೆಯ ಭರವಸೆಯಾಗಿ ನೀಡುತ್ತಿದ್ದೇವೆ ಎಂದು ಆರ್‌ಸಿಬಿ ಹೇಳಿದೆ.
ಕಳೆದ ಜೂ.4ರಂದು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮಿದ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಅಪಾರ ಅಭಿಮಾನಿಗಳು ಸೇರಿದ್ದರು. ತಮ ನೆಚ್ಚಿನ ಆಟಗಾರರನ್ನು ನೋಡಲು ಜಮಾಯಿಸಿದ ಪರಿಣಾಮ ಏಕಾಏಕಿ ಉಂಟಾದ ನೂಕುನುಗ್ಗಲಿನಿಂದಾದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಈ ಘಟನೆ ರಾಜ್ಯ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಸಿತ್ತು.
Previous Articleವಸತಿ ಶಾಲೆಯಲ್ಲಿ ತಾಯಿಯಾದ ಬಾಲಕಿ
Next Article ಅಭಿಮಾನ್ ಸ್ಟುಡಿಯೋ ಭೂಮಿ ಸರ್ಕಾರದ ವಶಕ್ಕೆ