ಬೆಂಗಳೂರು.
ಜೀವನದಿ ಕಾವೇರಿ ನದಿ ತೀರದ ಪ್ರದೇಶಗಳು ಪ್ರವಾಸಿಗರ ಅತ್ಯಂತ ಆಕರ್ಷಣೆಯ ತಾಣಗಳು ಅದರಲ್ಲೂ ತಲಕಾವೇರಿ, ಭಾಗಮಂಡಲ ಸಂಗಮ,ಮುತ್ತತ್ತಿ ಮೇಕೆದಾಟು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಇದರಲ್ಲಿ ಮೇಕೆದಾಟು,ಸಂಗಮ ಮತ್ತು ಮುತ್ತತ್ತಿಯಲ್ಲಿ ಕೆಲವು ಪ್ರವಾಸಿಗರು ಮದ್ಯಪಾನ ಮಾಡಿ ಮೈಮರೆತು ಅಪಾಯವನ್ನು ಆಹ್ವಾನಿಸುತ್ತಾರೆ.ಇದನ್ನು ನಿಯಂತ್ರಿಸುವ ಸಲುವಾಗಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಇದೀಗ ಹೊಸ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಈ ಪ್ರದೇಶದಲ್ಲಿ ಇಂತಹ ಅವಘಡ ನಡೆಯಬಾರದು ಎಂದು ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪ್ರಮುಖವಾಗಿ ಸಂಗಮ,ಮೇಕೆದಾಟು ಮತ್ತು ಮುತ್ತತ್ತಿಯಲ್ಲಿ ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
ಮುತ್ತತ್ತಿ ಕಾವೇರಿ ನದಿ ದಂಡೆಯಲ್ಲಿ ಹೊಸ ವರ್ಷ ಆಚರಿಸುವ ಸಲುವಾಗಿ Bengaluru, ಮೈಸೂರು, ರಾಮನಗರ, ಕನಕಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಪ್ರವಾಸಿಗರು ಮದ್ಯ ಸೇವನೆ ಮತ್ತು ಮೋಜು ಮಸ್ತಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ.
ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು, ವನ್ಯಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ
ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಸಿಆರ್‌ಪಿಸಿ ಕಲಂ 163ರ ಅನ್ವಯ ಡಿ.31ರ ಸಂಜೆ 6 ಗಂಟೆಯಿಂದ ಜ. 2 ಗುರುವಾರ ಬೆಳಿಗ್ಗೆ ಆರು ಗಂಟೆಯವರೆಗೆ ಮುತ್ತತ್ತಿ, ಭೀಮೇಶ್ವರಿ ಅರಣ್ಯ ಪ್ರದೇಶಕ್ಕೆ ನಿಷೇಧಾಜ್ಞೆ ಹೊರಡಿಸಲಾಗಿದೆ.
ಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
Previous Articleಹೊಸ ವರ್ಷವನ್ನು ಹೀಗೆ ಆಚರಿಸಬೇಕು.
Next Article ಕೆಎಸ್ಸಾರ್ಟಿಸಿ ಬಸ್ ಮುಷ್ಕರ ಇಲ್ಲ.