ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಪ್ರಪಂಚದಾದ್ಯಂತದ ಕಂಪನಿಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಇದೀಗ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳ ಅನುಕೂಲ ಹಾಗು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ. ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳುವ ಮೂಲಕ, ಬೆಂಗಳೂರು ಮೂಲದ ಭಾರತೀಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನಿತ್ಯ ಕೆಲಸದ ಸಮಯದಲ್ಲಿ ಸ್ವಲ್ಪ ನಿದ್ರೆ ಮಾಡಲು ಅವಕಾಶ ನೀಡುವುದಾಗಿ ತಿಳಿಸಿದೆ.
ವೇಕ್‌ಫಿಟ್ ಸಲ್ಯೂಶನ್ಸ್ ಕಂಪನಿ ನೌಕರರು ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ನಿದ್ರಿಸಲು ಅವಕಾಶ ಮಾಡಿಕೊಡುತ್ತಿದೆ ಈ ಸಮಯದಲ್ಲಿ ಯಾವುದೇ ಉದ್ಯೋಗಿಯ ಸಂಬಳವನ್ನು ಕಡಿತಗೊಳಿಸಲಾಗುವುದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಹೇಳಿದೆ.
ಬೆಂಗಳೂರಿನಲ್ಲಿರುವ ಈ ಸ್ಟಾರ್ಟ್ ಅಪ್ ಕಂಪನಿಯು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ನಿತ್ಯ ಕೆಲಸದ ಅವಧಿಯಲ್ಲಿ 30 ನಿಮಿಷಗಳ ಕಾಲ ಅಂದರೆ ದೈನಂದಿನ ಕರ್ತವ್ಯದ ಸಮಯದಲ್ಲಿ ಅರ್ಧ ಗಂಟೆ ಮಲಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಈಗ ಉದ್ಯೋಗಿಗಳು ಪ್ರತಿದಿನ ಮಧ್ಯಾಹ್ನ 2 ರಿಂದ 2.30 ರ ನಡುವೆ ಅರ್ಧ ಗಂಟೆ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಕಚೇರಿಯಲ್ಲಿ ನೌಕರರು ತಾತ್ಕಾಲಿಕವಾಗಿ ಮಲಗಲು ವ್ಯವಸ್ಥೆ ಕೂಡ ಮಾಡಲಾಗಿದೆ.
ಇದರಿಂದ ತನ್ನ ಉದ್ಯೋಗಿಗಳು ಫಿಟ್ ಆಗುತ್ತಾರೆ ಮತ್ತು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದು ಕಂಪನಿಯ ನಂಬಿಕೆಯಾಗಿದೆ.
Previous Articleಸಿಲ್ಲಿಲಲ್ಲಿ ಖ್ಯಾತಿಯ ಸುನೇತ್ರಾ ಪಂಡಿತ್ಗೆ ಆ್ಯಕ್ಸಿಡೆಂಟ್
Next Article ಕೈದಿ ನಂಬರ್ 18197