ಮೈಸೂರು : ಕನ್ನಡ ನಾಡಿನ ಜೀವನದಿ ಕಾವೇರಿ ಬರಿದಾಗುತ್ತಿದ್ದಾಳೆ. ಬಿರು ಬಿಸಿಲಿನ ತಾಪಕ್ಕೆ ಕರಗಿ ಹೋಗುತ್ತಿದ್ದಾಳೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ ಎಸ್ ನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು , ಸದ್ಯ 99 ಅಡಿಗೆ ಇಳಿದಿದೆ.
ಬೇಸಿಗೆಯ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಡ್ಯಾಂನ ನೀರಿನ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಬೆಂಗಳೂರು ,ಮಂಡ್ಯ, ಮೈಸೂರು ಸೇರಿ ಕಾವೇರಿ ಕೊಳ್ಳದ ಜಿಲ್ಲೆಗಳ ಜನತೆಯಲ್ಲಿ ಆತಂಕ ಶುರುವಾಗಿದೆ.
ಮಂಡ್ಯಮೈಸೂರು,ಬೆಂಗಳೂರು, ರಾಮನಗರ, ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಮೂಲವಾಗಿರೋ ಕೆ.ಅರ್.ಎಸ್ ಡ್ಯಾಂನಲ್ಲಿ ನೀರು ಕ್ಷೀಣಿಸುತ್ತಿರುವುದರಿಂದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
124.80 ಗರಿಷ್ಟ ಅಡಿ ನೀರಿನ ಮಟ್ಡದ ಕೆ.ಆರ್.ಎಸ್. ಡ್ಯಾಂನಲ್ಲಿ ನೀರು ಕಡಿಮೆ ಆಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಮಳೆಯಗದೆ ಇದ್ದರೆ ಕುಡಿಯುವ ನೀರಿನ ಸಮಸ್ಯೆ ಉಧ್ಭವದ ಆತಂಕ ಎದುರಾಗಿದೆ