Archives
    • March 2026
    • February 2026
    • January 2026
    • December 2025
    • November 2025
    • October 2025
    • September 2025
    • August 2025
    • July 2025
    • June 2025
    • May 2025
    • April 2025
    • March 2025
    • February 2025
    • January 2025
    • December 2024
    • November 2024
    • October 2024
    • September 2024
    • August 2024
    • July 2024
    • June 2024
    • May 2024
    • April 2024
    • March 2024
    • February 2024
    • January 2024
    • December 2023
    • November 2023
    • October 2023
    • September 2023
    • August 2023
    • July 2023
    • June 2023
    • May 2023
    • April 2023
    • March 2023
    • February 2023
    • January 2023
    • December 2022
    • November 2022
    • October 2022
    • September 2022
    • August 2022
    • July 2022
    • June 2022
    • May 2022
    • April 2022
    Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೈಲಾಸವಾಸಿಯಾದ ‘ಕಲೈವಾಣಿ’
    ಸಿನೆಮ

    ಕೈಲಾಸವಾಸಿಯಾದ ‘ಕಲೈವಾಣಿ’

    vartha chakraBy vartha chakraFebruary 4, 2023Updated:March 20, 20236 Comments3 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಎರಡು ದಿನಗಳ ಹಿಂದಷ್ಟೇ ಭಾರತೀಯ ಚಿತ್ರರಂಗ “ಕಲಾ ತಪಸ್ವಿ”ಯನ್ನು ಕಳೆದುಕೊಂಡಿತ್ತು. ಇಂದು, ಅಂದರೆ ಫೆಬ್ರವರಿ 4, 2023 ರಂದು ಮತ್ತೊಬ್ಬ ಅಮೋಘ ಕಲಾವಿದೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ, ಇಂಪಿನ ಕಂಠದ ಗಾಯಕಿ “ವಾಣಿ ಜಯರಾಮ್” ಅವರನ್ನು ಕಳೆದುಕೊಂಡು ಬಡವಾಗಿದೆ.

    ಚೆನ್ನೈನ ನುಂಗಂಬಕ್ಕಂ (Nungambakkam, Chennai) ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಅವರು ವಾಸಿಸುತ್ತಿದ್ದರು. 2018 ರಲ್ಲಿ ಪತಿ ಜಯರಾಮ್ ಅವರನ್ನು ಕಳೆದುಕೊಂಡ ಮೇಲೆ ಅವರು ಒಂಟಿ ಜೀವನವನ್ನು ನಡೆಸುತ್ತಿದ್ದರು. ಶನಿವಾರದಂದು ಎಂದಿನಂತೆ ಮನೆಯ ಕೆಲಸದ ಸಹಾಯಕಿ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಆದರೆ ಕೆಲ ಸಮಯದ ನಂತರವೂ ಯಾವುದೇ ಪ್ರತಿಕ್ರಿಯೆ ಬರದಿದ್ದ ಕಾರಣ ಅವರಿಗೆ ತಿಳಿದಿದ್ದ ವಾಣಿ ಜಯರಾಮ್ ಅವರ ಸಂಬಂಧಿಕರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ತಿಳಿಸಿದ ಸಂಬಂಧಿಕರು ವಾಣಿಯವರ ಮನೆಗೆ ಧಾವಿಸಿದ್ದಾರೆ. ಸಂಬಂಧಿಕರ ಎದುರಿನಲ್ಲಿ ಬಾಗಿಲನ್ನು ಒಡೆದಾಗ, ವಾಣಿ ಜಯರಾಮ್ ನಿಧನ ಹೊಂದಿದ ವಿಷಯ ಗೊತ್ತಾಗಿದೆ. ಅವರಿಗೆ 77 ವರ್ಷಗಳಾಗಿತ್ತು.

    ಅವರ ಬಾಲ್ಯ ಹೇಗಿತ್ತು? 

    ವಾಣಿ ಜಯರಾಮ್ ಅವರು 30 ನವೆಂಬರ್ 1945 ರಲ್ಲಿ, ತಮಿಳುನಾಡಿನ ವೆಲ್ಲೂರಿನಲ್ಲಿ (Vellore, TamilNadu) ಜನಿಸಿದರು. ಆರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳ ಕುಟುಂಬದಲ್ಲಿ ಐದನೇ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಕಲೈವಾಣಿ. 8 ನೇ ವಯಸ್ಸಿನಲ್ಲಿ, ಅವರು ಮದ್ರಾಸ್‌ನ ಆಲ್ ಇಂಡಿಯಾ ರೇಡಿಯೊದಲ್ಲಿ (All India Radio, Chennai) ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಮದ್ರಾಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ವಾಣಿಯವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮದ್ರಾಸ್‌ನಲ್ಲಿ (State Bank of India, Chennai) ಉದ್ಯೋಗಿಯಾಗಿದ್ದರು.

    1969 ರಲ್ಲಿ ಜೈರಾಮ್ ಅವರೊಂದಿಗಿನ ವಿವಾಹದ ನಂತರ, ಅವರು ತಮ್ಮ ಕುಟುಂಬವನ್ನು ಸ್ಥಾಪಿಸಲು ಮುಂಬೈಗೆ ತೆರಳಿದರು.  ಅವರ ಗಾಯನ ಕೌಶಲ್ಯವನ್ನು ತಿಳಿದ ಜೈರಾಮ್, ವಾಣಿಯವರನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯಲು ಮನವೊಲಿಸಿದರು. ಪಟಿಯಾಲಾ ಘರಾನಾದ ಉಸ್ತಾದ್ ಅಬ್ದುಲ್ ರೆಹಮಾನ್ ಖಾನ್ ಅವರ ಬಳಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡರು. ಇಲ್ಲಿ ಪಡೆದ ಕಠಿಣ ಮತ್ತು ಉತ್ಕೃಷ್ಟ ತರಬೇತಿಯೇ ಅವರನ್ನು ಸಂಗೀತವನ್ನು ವೃತ್ತಿಯನ್ನಾಗಿ ಪರಿಗಣಿಸುವಂತೆ ಮಾಡಿತು.

    ಎಂತಹುದೇ ಕಷ್ಟಕರವಾದ ಸಂಯೋಜನೆಯಾದರೂ ಸುಲಭವಾಗಿ ಹೊಂದಿಕೊಂಡು, ನಿರಾಯಾಸವಾಗಿ ಹಾಡಬಲ್ಲರೆಂಬ ಖ್ಯಾತಿ ಪಡೆದಿದ್ದರು ವಾಣಿ ಜಯರಾಮ್.  1970 ರ ದಶಕದಿಂದ 1990 ರ ದಶಕದ ಅಂತ್ಯದವರೆಗೆ ಭಾರತದಾದ್ಯಂತ ಹಲವಾರು ಸಂಯೋಜಕರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದರು. ಎಂಎಸ್ ಇಳಯರಾಜ (M S Ilaiyaraaja), ಆರ್‌ಡಿ ಬರ್ಮನ್ (RD Burman), ಕೆವಿ ಮಹದೇವನ್ (KV Mahadevan), ಒಪಿ ನಯ್ಯರ್ (O.P. Nayyar), ಮದನ್ ಮೋಹನ್ (Madan Mohan), ಎ ಆರ್ ರೆಹಮಾನ್ (A R Rehman) ಸೇರಿದಂತೆ ಇತರ ಪ್ರಸಿದ್ಧ ಸಂಗೀತ ನಿರ್ದೇಶಕರೊಡನೆ ಅವರು ಕೆಲಸ ಮಾಡಿದ್ದಾರೆ.

    ಅವರು ಹಲವಾರು ಭಾರತೀಯ ಭಾಷೆಗಳಲ್ಲಿ (19 ಭಾಷೆಗಳು), ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹೆಸರಾಂತ ಕಲಾವಿದರ ಚಿತ್ರಕ್ಕೆ ಹಾಡಿದ ಹೆಗ್ಗಳಿಕೆ ಇವರದ್ದು.

     

    ಅವರು ಗಳಿಸಿದ ಹಲವು ಪ್ರಶಸ್ತಿಗಳಲ್ಲಿ ಕೆಲವು –

    • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೂರು ಬಾರಿ ಗೆದ್ದಿದ್ದಾರೆ.
    • ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
    • 2012 ರಲ್ಲಿ, ಅವರು ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟರು.
    • 2021 ರಲ್ಲಿ ವೃತ್ತಿಪರ ಗಾಯಕಿಯಾಗಿ ತಮ್ಮ ಸುವರ್ಣ ಮಹೋತ್ಸವವನ್ನು ಪೂರ್ಣಗೊಳಿಸಿದ ವಾಣಿ ಜಯರಾಮ್ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

     

    ಅವರು ಹಾಡಿದ 10,000 ಸಾವಿರ ಹಾಡುಗಳಲ್ಲಿ ಕೆಲವು ಕನ್ನಡದ ಹಾಡುಗಳನ್ನು ನೆನೆಯುವುದಾದರೆ – 

    ಎಂದೆಂದೂ ನಿನ್ನನು ಮರೆತು – ಎರಡು ಕನಸು

    ರಂಗೇನ ಹಳ್ಳಿಯಾಗೆ – ಬಿಳಿ ಹೆಂಡತಿ

    ಸುತ್ತ ಮುತ್ತ ಯಾರೂ ಇಲ್ಲ – ಕಳ್ಳ ಕುಳ್ಳ

    ಶುಭ ಮಂಗಳ ಸುಮೂಹರ್ತವೆ – ಶುಭಮಂಗಳ

    ಬೆಳ್ಳಿ ಮೋಡವೇ ಎಲ್ಲಿ ಓದುವೆ – ವಸಂತ ಲಕ್ಷ್ಮಿ

    ಕನಸಲೂ ನೀನೇ ಮನಸಲೂ ನೀನೇ – ಬಯಲು ದಾರಿ

    ಬೆಸುಗೆ – ಬೆಸುಗೆ

    ಏನೇನೋ ಆಸೆ – ಶಂಕರ ಗುರು

    ತೆರೆದಿದೆ ಮನೆ – ಹೊಸ ಬೆಳಕು

    ಮಾನಸ ಸರೋವರ – ಮಾನಸ ಸರೋವರ

    ಲಾಲಿ ಲಾಲಿ ಸುಕುಮಾರ – ಭಕ್ತ ಪ್ರಹ್ಲಾದ

    ಕಣ್ಣು ಕಣ್ಣು ಕಲೆತಾಗ – ಕಾಮನಬಿಲ್ಲು

    ಏನು ಮಾಯವೋ ಏನು ಮರ್ಮವೋ – ಭಾಗ್ಯದ ಲಕ್ಷ್ಮಿ ಬಾರಮ್ಮ

    ರಾಗಕೆ ಸ್ವರವಾಗಿ – ಹೃದಯ ಪಲ್ಲವಿ

    ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಿರೋ – ರಣಧೀರ

     

    (ಚಿತ್ರಗಳ ಕೃಪೆ – ಅಂತರ್ಜಾಲ)

    Verbattle
    Verbattle
    Verbattle
    #chennai #cinema A R Rehman Entertainment india m M S Ilaiyaraaja mi RD Burman tamil tamil nadu tamilnad vani jayaram ಕಲೆ ಚಲನಚಿತ್ರ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous ArticleBjp ಅಧಿಕಾರಕ್ಕೆ ಬರುವುದನ್ನು ತಡೆಯಲಾಗುವುದಿಲ್ಲ
    Next Article ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಇನ್ನಿಲ್ಲ
    vartha chakra
    • Website

    Related Posts

    ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮೇ 4ಕ್ಕೆ ಫಲಿತಾಂಶ

    March 16, 2026

    ಸ್ವಾತಂತ್ರ್ಯದ ಹಾದಿಯಲ್ಲಿ ಮತ್ತೆ ಎಡವಿದ ಪಾಪ್ ಸುಂದರಿ?

    March 8, 2026

    ಅಣು ಯುದ್ಧದ ಅಬ್ಬರ: ಇದು ವಿಜಯೋತ್ಸವವಲ್ಲ, ಮಾನವಕುಲದ ಸಮಾಧಿ!

    March 5, 2026

    6 Comments

    1. съемник стеклоочистителей on March 16, 2026 4:13 pm

      Механизм съемник стеклоочистителей требует регулярного обслуживания.

      Reply
    2. fiverr telegram bot on March 16, 2026 10:49 pm

      This fiverr telegram bot is gold – gorgeous free
      gifts + strong channel acceleration

      Reply
    3. ремонт подвески автомобиля on March 18, 2026 9:01 am

      Схема подвеска автомобиля помогает в ремонт подвески автомобиляе и диагностике.

      Reply
    4. HeapsofwinsOnline_ng9 on March 18, 2026 12:55 pm

      Ngl I was pretty skeptical when I first heard about this but after actually using heaps o wins I was genuinely suprised at how well it worked, way better than expected honestly.

      Reply
    5. midjourney telegram bot on March 19, 2026 7:14 pm

      Channel growth without stress or wallet pain

      My web site; midjourney telegram bot

      Reply
    6. казино леонбет on March 20, 2026 10:39 pm

      леон бк зеркало

      Reply

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ವಾಹನ ಸವಾರರೇ ಎಚ್ಚರ!

    IPL ಇತಿಹಾಸದಲ್ಲೇ ಮೆಗಾ ಡೀಲ್!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Whitneyamola on ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
    • marocbikhir.com on ಪ್ರಗತಿಯ ಚಿತ್ರಣ ಬದಲಿಸುವ ಇಂಧನ ಇಲಾಖೆ | Dept Of Power
    • Rickytug on ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    Latest Kannada News

    ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್!

    March 27, 2026

    ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    March 27, 2026

    ವಾಹನ ಸವಾರರೇ ಎಚ್ಚರ!

    March 27, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.