ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೋರಾಟ ನಡೆದಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮೀಸಲಾತಿ ವಿಚಾರಕ್ಕಾಗಿ ಇಬ್ಬರು ಮೂರು ಮಂದಿ ಕುತಂತ್ರ ಮಾಡುತ್ತಿದ್ದಾರೆ. ಅವರ ಮಾತನ್ನು ಕೇಳಬೇಡಿ ಎಂದು ಸಿಎಂಗೆ ಸಲಹೆ ನೀಡಿದ್ದೇನೆ. ಸಲಹೆಯನ್ನು ಒಳ್ಳೇ ರೀತಿಯಾಗಿ ತೆಗೆದುಕೊಂಡರೆ ಅವರಿಗೆ ಒಳ್ಳೇದಾಗುತ್ತದೆ. ಸಿಎಂ 2A ಮೀಸಲಾತಿ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆ ಇದೆ. ಕೊಟ್ರೆ ಸನ್ಮಾನ ಮಾಡುತ್ತೆವೆ. ಕೊಡದೇ ಇದ್ರೆ ಹೋರಾಟ ಮಾಡುತ್ತೆವೆ ಎಂದಿದ್ದಾರೆ.
ಕಳೆದ ಬಾರಿ ಹೋರಾಟ ಮಾಡಿದನ್ನು ಸರ್ಕಾರ ನೋಡಿದೆ. ಜನರ ನಾಡಿ ಮಿಡಿತ ಏನು ಎಂದು ಕೇಂದ್ರ ನಾಯಕರಿಗೆ ಗೋತ್ತಾಗಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ 10 ಲಕ್ಷ ಜನರ ಸೇರಿಸಿ ಪ್ರತಿಭಟನೆ ಮಾಡಿದ್ದೇವೆ. ಆ ರ್ಯಾಲಿ ಮಾಡಿದಕ್ಕೆ ಕರ್ನಾಟಕದಲ್ಲಿ ಲಿಂಗಾತರಲ್ಲಿ ಪಂಚಮಸಾಲಿ 70 ಪ್ರತಿಶತ ಇದ್ದಾರೆ ಎನ್ನುವುದು ಗೋತ್ತಾಗಿದೆ. ಇದನ್ನು ಸ್ವತ: ಪ್ರಧಾನ ಮಂತ್ರಿಗಳೇ ಮಾಹಿತಿ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆಯಾಗಿದೆ.
ಮರಾಠಾ ಸಮುದಾಯಕ್ಕೆ 2A ಮೀಸಲಾತಿ ನೀಡಿದಾಗ ಸುಪ್ರೀಂ ಕೋರ್ಟ್ ನಿರಾಕರಿದ್ದು, ಕಾನೂನು ತಿದ್ದುಪಡಿ ಮಾಡಿ ಆಯಾ ರಾಜ್ಯಗಳಿಗೆ ಮೀಸಲಾತಿ ನೀಡುವ ಅವಕಾಶ ನೀಡಿಲಾಗಿದೆ. ಯಾವಯಾವ ರಾಜ್ಯದಲ್ಲಿ ಯಾವ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಪರಿಶೀಲನೆ ಮಾಡಿ ಮೀಸಲಾತಿ ನೀಡಲು ಅವಕಾಶ ನೀಡಿದೆ.
ಹಿಂದುಳಿದ ಮೀಸಲಾತಿ ಆಯಾ ರಾಜ್ಯಗಳೇ ನೀಡಬೇಕು ಎಂದು ಸವಿಧಾನ ತಿದ್ದುಪಡಿಯಾಗಿದೆ. ಇದರಿಂದ ಈ ರಾಜ್ಯದಲ್ಲಿ ಇರುವ ಬಹುಸಂಖ್ಯೆ ಲಿಂಗಾಯತ ಬಡವರಿಗೆ ನ್ಯಾಯ ಸಿಗುತ್ತದೆ ಎನ್ನುವ ನಿರೀಕ್ಷೆ ಇದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪಾ ಹಚ್ಚುವ ಕೆಲಸ ಈಗಾಗಲೇ ಆಗಿದೆ.
ಸಿಎಂ ಬೊಮ್ಮಾಯಿ ವಿಧಾಸೌಧದಲ್ಲಿ ಎಂಟು- ಹತ್ತು ದಿನದಲ್ಲಿ ವರದಿ ಬರುತ್ತದೆ. ವರದಿ ಆದರಿಸಿ ಸರ್ವ ಪಕ್ಷ ಸಭೆ ಕರೆದು ಮೀಸಲಾತಿ ನೀಡಯತ್ತೇನೆ ಎಂದು ಹೇಳಿದ್ರು. ಅವರು ಹೇಳಿ ತಿಂಗಳ ಕಳೆಯುತ್ತಾ ಬಂದಿದೆ. ಇನ್ನು ಮುಂದೆ ಕಾಯಲು ಆಗುವುದಿಲ್ಲ. ಏನು ಎನ್ನುವುದನ್ನು ಜನರ ಮುಂದೆ ಬಹಿರಂಗ ಪಡಿಸಬೇಕು ಒತ್ತಾಯಿಸಿದರು.