ಬೆಂಗಳೂರು,ಜು.16:
ಮಾಜಿ ಸಚಿವ ಹಾಗೂ ಬೆಂಗಳೂರಿನ ಕೃಷ್ಣರಾಜಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೆಸರು ಕೊಲೆ ಪ್ರಕರಣವೊಂದರಲ್ಲಿ ತಳುಕು ಹಾಕಿಕೊಂಡಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ರೌಡಿಶೀಟರ್ ಒಬ್ಬನ ಕೊಲೆ ಪ್ರಕರಣದಲ್ಲಿ ಮೃತನ ತಾಯಿ ನೀಡಿದ ದೂರಿನ ಅನ್ವಯ ಭೈರತಿ ಬಸವರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ಮಂಗಳವಾರ ರಾತ್ರಿ ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು
ಮೃತ ಶಿವಪ್ರಕಾಶ್ ಅವರು ತಾಯಿ ವಿಜಯಕ್ಷ್ಮಿ ಈ ಸಂಬಂಧ ಭಾರತಿನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದು ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದಾರೆ.
ತಮ್ಮ ಮಗ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ.ಕಿತ್ತಕನೂರು ಜಾಗದ ವಿಚಾರವಾಗಿ ಈ ಕೊಲೆ ನಡೆದಿದೆ. ಈ ಜಾಗದ ವ್ಯವಹಾರದ ಕುರಿತಾಗಿ ತನಗೆ ಮಾಜಿ ಸಚಿವ ಭೈರತಿ ಬಸವರಾಜ್ ಮತ್ತು ಅವರ ಆಪ್ತರಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಹಲವು ಬಾರಿ ಬೆದರಿಕೆಯೂ ಹಾಕಿದ್ದಾರೆ ಎಂದು ಹೇಳಿದ್ದ.
ಇದಾದ ಕೆಲವೇ ದಿನಗಳಲ್ಲಿ ಕೊಲೆ ನಡೆದಿದೆ.ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ 8 ರಿಂದ 9 ಮಂದಿ ನನ್ನ ಮಗನಿಗೆ ಮಚ್ಚಿನಿಂದ ಹೊಡೆದಿದ್ದಾರೆ. ಎಂದು ದೂರಿನಲ್ಲಿ ತಿಳಿಸಿದ್ದಾರೆ ಈ ಸಂಬಂಧ ಭಾರತಿ ನಗರ ಠಾಣೆ ಪೊಲೀಸರು ಬೈರತಿ ಬಸವರಾಜು ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭೈರತಿ ಬಸವರಾಜು ಅವರು, ದುರುದ್ದೇಶ ಪೂರಕವಾಗಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆಪಾದಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪದಲ್ಲಿ ಸಿಲುಕಿರುವ ಯಾವುದೇ ವ್ಯಕ್ತಿಗಳ ಜೊತೆಗೆ ತಮಗೆ ಯಾವುದೇ ಸಂಬಂಧ ಇಲ್ಲ ಅವರು ನನಗೆ ಪರಿಚಯವೇ ಇಲ್ಲ ಆದರೂ ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಈ ಬಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಅಷ್ಟೇ ಅಲ್ಲ ಕಾನೂನು ಹೋರಾಟ ಕೂಡ ನಡೆಸುತ್ತೇನೆ ಎಂದು ಹೇಳಿದ್ದಾರೆ.