ಬೆಂಗಳೂರು Aug 29: ರಾಜಧಾನಿ ಮಹಾನಗರೀ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾಂಕ್ರಾಮಿಕ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ನಿಯಂತ್ರಣ ದೃಷ್ಟಿಯಿಂದ ಸರ್ಕಾರ ಇದೀಗ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಾಲು ಸಾಲಾಗಿ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯಬೇಕಿದೆ. ಹೀಗಾಗಿ ಗೌರಿ ಹಬ್ಬ, ಗಣೇಶ ಚತುರ್ಥಿ, ಓಣಂ, ಅನಂತ ಪದ್ಮನಾಭ ವ್ರತ, ವಿಶ್ವಕರ್ಮ ಜಯಂತಿ, ಮಹಾಲಯ ಅಮಾವಾಸ್ಯೆ ದಿನಗಳಂದು ಜನರು ಗುಂಪು ಸೇರದಂತೆ ತಡೆಯಬೇಕು. ಗಣೇಶೋತ್ಸವವನ್ನು ಹೊರಾಂಗಣ ಪ್ರದೇಶಗಳಲ್ಲಿ ಆಚರಿಸುವುದು ಸೂಕ್ತ. ಜನರ ದೇಹದ ತಾಪಮಾನ ಪರೀಕ್ಷೆ ನಡೆಸಲು ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಅಳವಡಿಸಬೇಕು. ಸ್ಯಾನಿಟೈಸರ್ ಒದಗಿಸಬೇಕು. ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ವಸತಿ ಸಮುಚ್ಚಯಗಳ ಸಾಮಾನ್ಯ ಪ್ರದೇಶಗಳು, ಛತ್ರಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್‌ಗಳು, ಬಸ್, ಮೆಟ್ರೊ ರೈಲು, ರೈಲುಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೋಟೆಲ್, ಕ್ಲಬ್, ರೆಸ್ಟೋರೆಂಟ್, ಪಬ್, ಬಾರ್‌ಗಳಲ್ಲಿ ಆಹಾರ ಸೇವನೆಯ ಸಮಯವನ್ನು ಹೊರತುಪಡಿಸಿದ ಅವಧಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Previous Articleನಂಬಿದ್ದ ಸ್ವಾಮಿ ವಿಕೃತ ಕಾಮಿ ಹೇಗಾದರು..?
Next Article ಮಳೆಯ ಹೊಡೆತಕ್ಕೆ ತತ್ತರಿಸಿದ ಬೆಂಗಳೂರು