ಬೆಂಗಳೂರು,ಜು.2-
ಗಗನಯಾತ್ರೆ ಕೈಗೊಳ್ಳುವ ಆಸೆಯಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಭಾರತದ ನಾಗರೀಕರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನಾ ಸಂಸ್ಥೆ(ಇಸ್ರೋ) ಹಾಕಿಕೊಂಡಿದೆ.
ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸದ ದೇಶಗಳ ನಾಗರಿಕರಿಗಾಗಿ ಮಾನವ ಬಾಹ್ಯಾಕಾಶಯಾನ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನಾ ಸಂಸ್ಥೆ,ನಾನಾ ಭಾರತವನ್ನು ಪಾಲುದಾರ ರಾಷ್ಟ್ರವೆಂದು ಘೋಷಿಸಿದೆ.
ಈ ಮೂಲಕ ಭಾರತದ ನಾಗರೀಕರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಅಮೆರಿಕಾ ಮೂಲದ ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನಾ ಸಂಸ್ಥೆ ನಾಸಾ ಒರಿಜಿನ್‌ನ ಮರುಬಳಕೆ ಮಾಡಬಹುದಾದ ಸಬ್‌ಆರ್ಬಿಟಲ್ ರಾಕೆಟ್‌ನ ನ್ಯೂ ಶೆಪರ್ಡ್‌ನ ಭವಿಷ್ಯದ ಮಿಷನ್‌ನಲ್ಲಿ ಪ್ರಪಂಚದಾದ್ಯಂತದ ನಾಗರಿಕರಿಗೆ ಆರು ಆಸನಗಳನ್ನು ಒದಗಿಸುತ್ತದೆ.
ಬ್ಲೂ ಒರಿಜಿನ್ ಸಂಸ್ಥೆಯ ಸಹಯೋಗದೊಂದಿಗೆ ಕಡಿಮೆ ಅಥವಾ ಗಗನಯಾತ್ರಿಗಳನ್ನು ಹೊಂದಿರದ ಆರು ರಾಷ್ಟ್ರಗಳ ನಾಗರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜನೆ ಹಾಕಿಕೊಂಡಿದೆ.
ಶೆಪರ್ಡ್ ಆಯ್ಕೆಯಾದ ಗಗನಯಾತ್ರಿಗಳನ್ನು 11 ನಿಮಿಷಗಳ ಪ್ರಯಾಣದಲ್ಲಿ ಕಾರ್ಮಾನ್ ರೇಖೆಯನ್ನು (100 ಕಿಮೀ), ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯನ್ನು ದಾಟಿಸುತ್ತದೆ. ಗಗನಯಾತ್ರಿಗಳು ಲ್ಯಾಂಡಿಂಗ್ ಪ್ಯಾಡ್‌ಗೆ ಇಳಿಯುವ ಮೊದಲು ಆಗಸದಲ್ಲಿ ಹಲವಾರು ನಿಮಿಷಗಳ ಕಾಲ ತೂಕವಿಲ್ಲದ ಅನುಭವವನ್ನು ಅನುಭವಿಸುತ್ತಾರೆ.
ಬಾಹ್ಯಾಕಾಶ ಪರಿಶೋಧನೆ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಜೋಶುವಾ ಸ್ಕುರ್ಲಾ ಅವರು ಭಾರತವು ನಮ್ಮ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಭಾಗವಾಗಿ ಇರುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಎಂದರು.
ಭಾರತವು ಕಳೆದ ಕೆಲವು ವರ್ಷಗಳಿಂದ ತನ್ನ ಬಾಹ್ಯಾಕಾಶ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ, ಇದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿದೆ. ಪ್ರತಿಯೊಬ್ಬರಿಗೂ ಬಾಹ್ಯಾಕಾಶವನ್ನು ಪ್ರವೇಶಿಸಲು ನಾವು ಅನುವು ಮಾಡಿಕೊಡುತ್ತೇವೆ ಮತ್ತು ಬಾಹ್ಯಾಕಾಶ ಪ್ರಯಾಣದ ಅದ್ಭುತಗಳನ್ನು ಅನುಭವಿಸಲು ಬಯಸುವ ಭಾರತೀಯ ನಾಗರಿಕರಿಗೆ ಈ ಅನನ್ಯ ಅವಕಾಶವನ್ನು ನೀಡಲು ಸಂತೋಷಪಡುತ್ತೇವೆ ಎಂದು ತಿಳಿಸಿದರು
Previous Articleಜುಲೈ 15 ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ.
Next Article MUDA ಅಕ್ರಮದ ಸುಳಿಯಲ್ಲಿ ಸಿದ್ದರಾಮಯ್ಯ.