ಟ್ರೋಲ್‌ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಸಚಿವ
ಬಾಲಕಿಯರ ಶೈಕ್ಷಣಿಕ ಪ್ರಗತಿಗಾಗಿ ರೂಪಿಸಿರುವ ‘ಗೆಳತಿಯರೊಂದಿಗೆ ಹಾರೋಣ’ ಎಂಬ ಕಾರ್ಯಕ್ರಮದ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿತ್ತು. ಈ ಹೆಸರು ಹೇಗೆ ನಾಮಕರಣ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಜಿಬಿವಿಗಳಲ್ಲಿ ಹೆಣ್ಣು ಮಕ್ಕಳೇ ಇರುವುದರಿಂದ ಆ ಹೆಸರು ನೀಡಲಾಗಿದೆ. ಟ್ರೋಲ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಮಕ್ಕಳಿಗೆ ಯಾವ ಕಾರ್ಯಕ್ರಮ ನೀಡಿದ್ದೇವೆ ಎನ್ನುವುದು ಮುಖ್ಯ ಅಷ್ಟೆ ‘ ಎಂದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಫೌಂಡೇಷನ್‌ನ ಪ್ರತಿನಿಧಿಗಳು, ‘ ರಾಷ್ಟ್ರ ಮಟ್ಟದಲ್ಲಿ‘ಸಹೇಲಿ ಕಿ ಉಡಾನ್-ಫ್ಲೈಯಿಂಗ್ ವಿತ್ ಫ್ರೆಂಡ್ಸ್’ ಎಂಬ ಹೆಸರನ್ನು ಈ ಕಾರ್ಯಕ್ರಮಕ್ಕಿಡಲಾಗಿದೆ. ಇದನ್ನು ಕನ್ನಡಕ್ಕಿಡುವಾಗ ‘ಗೆಳತಿಯರೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಆಡೋಣ’ ಎಂಬ ಹೆಸರಿಡುವ ಬಗ್ಗೆ ಚರ್ಚೆಯಾಯಿತು. ಕೊನೆಗೆ ವಿದ್ಯಾರ್ಥಿನಿಯರೇ ‘ಗೆಳತಿಯರೊಂದಿಗೆ ಹಾರೋಣ’ ಎಂಬ ಹೆಸರು ಸೂಚಿಸಿದರು” ಎಂದರು.