ಮಿಂಚಿನಂತೆ ವೇಗವಾಗಿ ಓಡುವ ಪ್ರಾಣಿ ಚಿರತೆ. ಈ ಚಿರತೆ ಬೇಟೆಯಾಡುವುದಂತು ಅತ್ಯಂತ ರೋಮಾಂಚಕಾರಿ. ಪ್ರಾಣಿಯನ್ನು ಬೆನ್ನಟ್ಟಿ ಶರವೇಗದಲ್ಲಿ ಓಡುವ ಚಿರತೆ ಕ್ಷಣ ಮಾತ್ರದಲ್ಲಿ ಬೇಟೆಯನ್ನ ತನ್ನದಾಗಿಸಿಕೊಳ್ಳುತ್ತದೆ. ಇಂತಹ ಬೇಟೆಯ ದೃಶ್ಯವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವರೆಗೆ 42 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ
ಚಿರತೆಯೊಂದು ಬೇಟೆಯಾಡಲು ಹಿಂಬಾಲಿಸುತ್ತಿರುವುದರಿಂದ ಜಿಂಕೆಗಳ ಹಿಂಡು ಪೊದೆಗಳ ಮೂಲಕ ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಜಿಂಕೆಗಳ ಹಿಂಡು ತನ್ನ ಜೀವವನ್ನು ಉಳಿಸಿಕೊಳ್ಳಲು ಓಡುತ್ತಿರುವಾಗ, ಅವುಗಳಲ್ಲಿ ಒಂದು ಜಿಂಕೆ ಗಾಳಿಯಲ್ಲಿ ಹಾರುತ್ತದೆ. ಜಿಂಕೆಯ ಹಿಂದೆಯೇ ಇದ್ದ ಚಿರತೆ ಕೂಡ ಗಾಳಿಯಲ್ಲಿ ಹಾರಿ ತನ್ನ ಬೇಟೆಯನ್ನು ಹಿಡಿಯುತ್ತದೆ.
ಚಿರತೆ ಆ ಜಿಂಕೆಯನ್ನು ಗಾಳಿಯಲ್ಲಿಯೇ ಬೇಟೆಯಾಡುತ್ತದೆ. ನೆಟಿಗರು ಈ ಅದ್ಬುತ ವಿಡಿಯೋವನ್ನು ಸಾಕಷ್ಟು ಶೇರ್ ಮಾಡುತ್ತಿದ್ದಾರೆ, ಅದೇ ವೇಳೆಗೆ ಭಿನ್ನ ವಿಭಿನ್ನ ಕಾಮೆಂಟ್ಸ್ ಕೂಡ ಬರ್ತಿದೆ ಅದೇನಿದ್ದರೂ ಚಿರತೆ ವಿಡಿಯೋ ಯಾತ್ರೆ ಮೈ ಜುಂ ಎನಿಸುವಂತಿದೆ