ಬೆಂಗಳೂರು,ಅ.4:
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಗೊಂದಲಗಳಿಂದ ಸಾಕಷ್ಟು ಸುದ್ದಿಯಾಗುತ್ತಿದೆ.ಸಮೀಕ್ಷೆಯ ಸಮಯದಲ್ಲಿ ಕೇಳುವ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಇದರ ಅಗತ್ಯವಿದೆಯಾ ಎಂದು ಕೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಸಮೀಕ್ಷೆಗೆ ಬಂದ ಅಧಿಕಾರಿಗಳಿಗೆ
ತಮ್ಮ ಪತ್ನಿಯ ಜೊತೆಗೂಡಿ ವಿವರಗಳನ್ನು ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ಚಿನ್ನಾಭರಣ ಸೇರಿದಂತೆ ಹಲವು ವಿಷಯಗಳ ಕುರಿತು ಕೇಳಿದ ಮಾಹಿತಿಗೆ ಸಿಡಿಮಿಡಿಗೊಂಡರು.
ಈ ಸಮೀಕ್ಷೆಯಲ್ಲಿ ಇಂತಹ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ತಮ್ಮ ಕುಟುಂಬದ ಸಮೀಕ್ಷೆಗೆ ಕನಿಷ್ಠ ಒಂದು ಗಂಟೆ ವ್ಯಯಸಿದ್ದನ್ನು ಕಂಡು ಇಷ್ಟೊಂದು ಸಮಯ ತೆಗೆದುಕೊಂಡರೆ ಸಮೀಕ್ಷೆ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣತಿ ದಾರರಿಗೆ ತಮ್ಮ ವಿವರಗಳನ್ನು ನೀಡಿದ ಡಿಕೆ ಶಿವಕುಮಾರ್ ತಮ್ಮ ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ ಎಂಕಾಮ್ ಶಿಕ್ಷಣ ಪಡೆದಿದ್ದೇನೆ ಎಂದರು. ಉದ್ಯೋಗದ ಕುರಿತ ಪ್ರಶ್ನೆಗೆ, ‘ಕೃಷಿ ಎಂದು ಹಾಕಿ’ ಎಂದರು. ಧರ್ಮ: ಹಿಂದೂ, ಜಾತಿ: ಒಕ್ಕಲಿಗ ಗೌಡ ಒಕ್ಕಲಿಗ(154), ಜಾತಿ ಪ್ರಯಾಣ ಪತ್ರ ಶಾಲೆಯಲ್ಲಿ ಪಡೆದಿದ್ದೇನೆ.
31ರ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ,ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರ ನೀಡಿದರು. ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ, ಉದ್ಯೋಗದ ಪ್ರಶ್ನೆಗೆ ಪಬ್ಲಿಕ್ ಸರ್ವಂಟ್,ಸ್ವ ಉದ್ಯೋಗ ಎಂದು ಬರೆದುಕೊಳ್ಳಿ ಎಂದು ಹೇಳಿದರು
ಕುಲ ಕಸುಬು ಕೃಷಿ ಸಾಗುವಳಿ ಎಂದ ಅವರು, ಆದಾಯದ ಬಗ್ಗೆ ಪ್ರಶ್ನೆ ಬಂದಾಗ ದೊಡ್ಡ ಸ್ಲಾಬ್ ಹಾಕು ಎಂದು ಹೇಳಿದರು. ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಗೆ ‘ಮಂತ್ರಿ ಹಾಕು’ ಎಂದು ಹೇಳಿದರು. ಈ ವೇಳೆ ಅಂಥ ಆಯ್ಕೆ ಇಲ್ಲ ಎಂದಿದ್ದಕ್ಕೆ, ‘ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್’ ಎಂದು ಹಾಕುವಂತೆ ತಿಳಿಸಿದರು. ಮಾರ್ಕೆಟಿಂಗ್ ಸೊಸೈಟಿ, ಬೇಕಾದಷ್ಟು ನಿಗಮ ಮಂಡಳಿಗಿದ್ದೇನಲ್ಲ ಎಂದು ಡಿಕೆಶಿ ಹೇಳಿದರು.
ಇಷ್ಟು ಪ್ರಶ್ನೆಗಳನ್ನು ಕೇಳಿದ ಬಳಿಕ, ಪ್ರಶ್ನೆಗಳು ತುಂಬಾ ಆದವು. ಇದೆಲ್ಲವೂ ಬಹಳ ಸಿಂಪಲ್ ಆಗಿ ಇರಬೇಕು ಎಂದು ಹೇಳಿದರು. ಕುಟುಂಬ ಹೊಂದಿರುವ ಆಸ್ತಿ 50-50 ಎಕರೆ ಹಾಕಿ ಎಂದು ಡಿಕೆಶಿ ಹೇಳಿದರು. ಬ್ಯುಸಿನೆಸ್‌ಗೋಸ್ಕರ ಸಾಲ ಇದೆ. ಬ್ಯಾಂಕ್‌ನಲ್ಲಿ ಮಾಡಿದ್ದೇವೆ. 25 ಹಸು ಇದೆ, ಎತ್ತು ಇದೆ, ಕುರಿ ಮೇಕೆ ಹತ್ತತ್ತು ಹಾಕು ಎಂದು ಹೇಳಿದರು. ಹೈನುಗಾರಿಕೆ ,ಕೋಳಿ ಸಾಕಾಣಿಕೆ ,ರೇಷ್ಮೆ ಇದೆ. ವಾಣಿಜ್ಯ ಕಟ್ಟಡ 4 ಹಾಕೊಳ್ಳಿ, ತೋಟದ ಮನೆ ಇದೆ. ಇತರ ಕಟ್ಟಡ ಪಟ್ಟಿಕೊಡಬೇಕು ಅಷ್ಟೇ ಎಂದರು.
ಬಳಿಕ ಉಷಾ ಶಿವಕುಮಾರ್‌ಗೆ ಪ್ರಶ್ನೆಗಳನ್ನು ಕೇಳಲಾಯಿತು.ಮನೆ ಸಂಖ್ಯೆ 128 ಇರಬೇಕು.. ಅಂಚೆ ವಿಳಾಸ ದೊಡ್ಡಾಲಹಳ್ಳಿ.
ಎರಡು ಫಾರ್ಮ್ ಹೌಸ್, ಕಂಪ್ಯೂಟರ್, ಪ್ರಿಡ್ಜ್ ಒಂದ್ 5 ಹಾಕಿಕೊಳ್ಳಿ. ಎಸಿ ಇದೆ ಎಂದು ಹೇಳಿದರು. ಫ್ಯಾಕ್ಸ್ ಇದ್ಯಾ ಎನ್ನುವ ಪ್ರಶ್ನೆಗೆ, ‘ಇದನೆಲ್ಲಾ ಯಾಕೆ ಹಾಕಿದ್ರಿ.ಈಗ ಯಾರದ್ದಿರುತ್ತೆ ಫ್ಯಾಕ್ಸ್’ ಎಂದು ಉತ್ತರಿಸಿದರು.
ಈ ವೇಳೆ ಗಣತಿ ದಾರರು ತಮ್ಮ ಬಳಿ ಚಿನ್ನಾಭರಣಗಳಿವೆಯಾ, ಇದ್ದರೆ ಎಷ್ಟಿದೆ ಎಂದು ಕೇಳಿದರು. ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವಕುಮಾರ್ ಜ್ಯುವೆಲರಿ ಇದೆಯಾ ಇಲ್ಲವಾ ಅನ್ನೋದು ನಿಮಗ್ಯಾಕೆ ತೀರಾ ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರದು. ನಮ್ಮ ಮನೆಯಲ್ಲೇ 1 ಗಂಟೆ ಆಯ್ತು ದಿನಕ್ಕೆ ಎಷ್ಟು ಸಮೀಕ್ಷೆ ಮಾಡ್ತೀರಾ ಎಂದು ಪ್ರಶ್ನಿಸಿದರು.
Previous Articleಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಹುಟ್ಟುಹಬ್ಬ.
Next Article ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

